ದಯಾನಿಧಿ ಮಾರನ್
ದಯಾನಿಧಿ ಮಾರನ್

ಸೈಬರ್ ವಂಚನೆ: 99,999 ರೂ. ಕಳೆದಕೊಂಡ ಡಿಎಂಕೆ ಸಂಸದ ದಯಾನಿಧಿ ಮಾರನ್

ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರಿಗೆ ಸೈಬರ್ ವಂಚನೆಯ ಬಿಸಿ ತಟ್ಟಿದ್ದು, ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ಸಚಿವರು ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ 99,999 ರೂ. ಕಳೆದುಕೊಂಡಿದ್ದಾರೆ.

ಚೆನ್ನೈ: ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರಿಗೆ ಸೈಬರ್ ವಂಚನೆಯ ಬಿಸಿ ತಟ್ಟಿದ್ದು, ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ಸಚಿವರು ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ 99,999 ರೂ. ಕಳೆದುಕೊಂಡಿದ್ದಾರೆ.

ಈ ಸಂಬಂಧ ಗ್ರೇಟರ್ ಚೆನ್ನೈ ಸಿಟಿ ಪೊಲೀಸ್ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ.

ಸೈಬರ್ ವಂಚನೆಗೆ ಒಳಗಾಗಿರುವ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾರನ್ ಅವರು, ಕಳೆದ ಭಾನುವಾರ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನ ನೆಟ್ ಬ್ಯಾಂಕಿಂಗ್ ವರ್ಗಾವಣೆಯ ಮೂಲಕ ತಮ್ಮ ಆಕ್ಸಿಸ್ ಬ್ಯಾಂಕ್ ನ ವೈಯಕ್ತಿಕ ಉಳಿತಾಯ ಖಾತೆಯಿಂದ 99,999 ರೂಪಾಯಿಯನ್ನು ಎಲ್ಲಾ ಸಾಮಾನ್ಯ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ  ದಯಾನಿಧಿ ಮಾರನ್ ಅವರು, ತಮ್ಮ ಪತ್ನಿ ಪ್ರಿಯಾ ಮಾರನ್ ಅವರಿಗೆ ಭಾನುವಾರ ಅಪರಿಚಿತ ಫೋನ್ ಕರೆಯೊಂದು ಬಂದಿದ್ದು, 99,999 ರೂಪಾಯಿ ವರ್ಗಾಯಿಸುವಂತೆ ಹೇಳಿದ್ದಾರೆ. ಪ್ರಿಯಾಗೆ ಮೂರು ಬಾರಿ ಈ ರೀತಿಯ ಕರೆಗಳು ಬಂದಿದ್ದು, ಅವರು ಯಾವುದೇ ರೀತಿಯ ಒಟಿಪಿ ಅಥವಾ ಇತರೆ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದಾರೆ.

ದಯಾನಿಧಿ ಮಾರನ್ ಹಾಗೂ ಅವರ ಪತ್ನಿ ಪ್ರಿಯಾ ಇಬ್ಬರೂ ಹೊಂದಿದ್ದ ಆಕ್ಸಿಸ್ ಬ್ಯಾಂಕ್ ನ ಜಂಟಿ ಖಾತೆಯಿಂದ 99,999 ರೂಪಾಯಿ ವರ್ಗಾವಣೆಯಾಗಿದೆ. ಈ ಖಾತೆಗೆ ಪ್ರಿಯಾ ಅವರ ಫೋನ್ ನಂಬರ್ ಲಿಂಗ್ ಆಗಿಲ್ಲ ಎಂದು ದಯಾನಿಧಿ ಮಾರನ್ ಅವರು ತಿಳಿಸಿದ್ದಾರೆ.

X

Advertisement

X
Kannada Prabha
www.kannadaprabha.com