ಇಸ್ರೋ ಪ್ರಗತಿ ಪರಿಶೀಲಿಸಿದ ಪ್ರಧಾನಿ: 2035ರ ವೇಳೆಗೆ ಸ್ಪೇಸ್ ಸ್ಟೇಷನ್; 2040ರ ವೇಳೆಗೆ ಚಂದ್ರನ ಮೇಲೆ ಭಾರತೀಯ...

ಚಂದ್ರಯಾನ ಯಶಸ್ಸಿನ ಉತ್ತೇಜನಗೊಂಡಿರುವ ಇಸ್ರೋ ಸಂಸ್ಥೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ಇಂದು ಭಾಗವಹಿಸಿದ್ದರು. 
ಇಸ್ರೋ ವಿಜ್ಞಾನಿಗಳೊಂದಿಗೆ ಪ್ರಧಾನಿ ಮೋದಿ ಸಭೆ
ಇಸ್ರೋ ವಿಜ್ಞಾನಿಗಳೊಂದಿಗೆ ಪ್ರಧಾನಿ ಮೋದಿ ಸಭೆ
Updated on

ನವದೆಹಲಿ: ಚಂದ್ರಯಾನ ಯಶಸ್ಸಿನ ಉತ್ತೇಜನಗೊಂಡಿರುವ ಇಸ್ರೋ ಸಂಸ್ಥೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ಇಂದು ಭಾಗವಹಿಸಿದ್ದರು. 

2025 ರಿಂದ 2040 ವರೆಗೆ ಸಾಧಿಸಬೇಕಿರುವ ಅಂಶಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿ 2040 ರ ವೇಳೆಗೆ ಚಂದ್ರನ ಮೇಲೆ ಓರ್ವ ಭಾರತೀಯನನ್ನು ಕಳಿಸುವ ಯೋಜನೆಗಳನ್ನು ಸಾಧಿಸಬೇಕು ಎಂದು ಪ್ರಧಾನಿ ಮೋದಿ ಇಸ್ರೋಗೆ ಹೇಳಿದ್ದಾರೆ.

ಗಗನ್ ಯಾನ್ ಮಿಷನ್ ಭಾಗವಾಗಿ ಅ.21 ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 7 ರಿಂದ 9ವರೆಗೆ ಪರೀಕ್ಷಾ ವಾಹಕದ ಉಡಾವಣೆ ಮಾಡುವ ಮೂಲಕ ಗಗನ್​​ಯಾನ ಮಾನವ ರಹಿತ ಹಾರಾಟ ಪರೀಕ್ಷೆಯನ್ನು ನಡೆಸುವುದು ಹಾಗೂ ಇನ್ನಿತರ ಉಪಕ್ರಮಗಳ ಬಗ್ಗೆ ಇಸ್ರೋ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ನಿರ್ದೇಶನ ನೀಡಿದ್ದಾರೆ.

ಸಭೆಯ ಬಳಿಕ ಪ್ರಧಾನಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದ ಮೊದಲ ಮಾನವ ಅಂತರಿಕ್ಷಯಾನ 2025 ಕ್ಕೆ ನಡೆಯಲಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ, ಪ್ರಧಾನಿ, ಭಾರತದ ಬಾಹ್ಯಾಕಾಶ ಪರಿಶೋಧನೆಯ ಪ್ರಯತ್ನಗಳ ಭವಿಷ್ಯವನ್ನು ವಿವರಿಸಿದರು ಮತ್ತು ವೀನಸ್ (ಶುಕ್ರ) ಆರ್ಬಿಟರ್ ಮಿಷನ್, ಮಾರ್ಸ್ ಲ್ಯಾಂಡರ್ ಸೇರಿದಂತೆ ಅಂತರಗ್ರಹ ಕಾರ್ಯಾಚರಣೆ ಹಾಗೂ ಚಂದ್ರನನ್ನು ಹೆಚ್ಚು ವಿವರವಾಗಿ ಅನ್ವೇಷಿಸುವೆಡೆಗೆ ಕೆಲಸ ಮಾಡಲು ವಿಜ್ಞಾನಿಗಳನ್ನು ಕೇಳಿದ್ದಾರೆ.

2035 ರ ವೇಳೇಗೆ ಭಾರತೀಯ ಅಂತರಿಕ್ಷ ನಿಲ್ದಾಣ (ಭಾರತೀಯ ಬಾಹ್ಯಾಕಾಶ ನಿಲ್ದಾಣ)  2040 ರ ವೇಳೆಗೆ ಚಂದ್ರನ ಮೇಲೆ ಭಾರತೀಯರನ್ನು ಕಳಿಸುವ ಮಹತ್ವಾಕಾಂಕ್ಷೆಯ ಯೋಜನೆಗಳ ಗುರಿಯನ್ನು ಭಾರತ ಹೊಂದಿರಬೇಕು ಎಂದು ಪ್ರಧಾನಿ ವಿಜ್ಞಾನಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ದೃಷ್ಟಿಯನ್ನು ಸಾಕಾರಗೊಳಿಸಲು, ಬಾಹ್ಯಾಕಾಶ ಇಲಾಖೆಯು ಚಂದ್ರನ ಅನ್ವೇಷಣೆಗಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com