ಅಯೋಧ್ಯೆ: ರಾಮಮಂದಿರದಲ್ಲಿ 'ರಾಮಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ 'ಶುಭ ಮುಹೂರ್ತ' ಫಿಕ್ಸ್!

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸುವ 10 ದಿನಗಳ ಆಚರಣೆಗಳು ಮುಂದಿನ ವರ್ಷ ಜನವರಿ 16 ರಂದು ಪ್ರಾರಂಭವಾಗಲಿದ್ದು, ಜನವರಿ 22 ರಂದು ಮಧ್ಯಾಹ್ನ 12-45 ರಿಂದ 1 ಗಂಟೆ ನಡುವೆ 'ಶುಭ ಮುಹೂರ್ತ' ನಡೆಯಲಿದೆ. 
ಅಯೋಧ್ಯೆ ರಾಮಮಂದಿರದ ಚಿತ್ರ
ಅಯೋಧ್ಯೆ ರಾಮಮಂದಿರದ ಚಿತ್ರ
Updated on

ಲಖನೌ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸುವ 10 ದಿನಗಳ ಆಚರಣೆಗಳು ಮುಂದಿನ ವರ್ಷ ಜನವರಿ 16 ರಂದು ಪ್ರಾರಂಭವಾಗಲಿದ್ದು, ಜನವರಿ 22 ರಂದು ಮಧ್ಯಾಹ್ನ 12-45 ರಿಂದ 1 ಗಂಟೆ ನಡುವೆ 'ಶುಭ ಮುಹೂರ್ತ' ನಡೆಯಲಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಹೊರತುಪಡಿಸಿ, ದೇಶಾದ್ಯಂತದ 140 ವಿವಿಧ ಪಂಗಡಗಳ 4,000 ಸಂತರು ಮತ್ತು ಪುರೋಹಿತರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚುವರಿಯಾಗಿ ಹುತಾತ್ಮ ಯೋಧರು ಮತ್ತು ಕರಸೇವಕರ ಕುಟುಂಬಗಳೊಂದಿಗೆ ವಿವಿಧ ಪ್ರದೇಶಗಳಿಂದ 2,500 ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. 

ವಾರಣಾಸಿಯ ವೈದಿಕರಾದ ಲಕ್ಷ್ಮೀಕಾಂತ ದೀಕ್ಷಿತ್ ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕದ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಜ್ಯೋತಿಷಿಗಳು ಮತ್ತು ವೈದಿಕ ಪುರೋಹಿತರೊಂದಿಗೆ ಸಮಾಲೋಚಿಸಿದ ನಂತರ, ಜನವರಿ 22 ರಂದು 'ಶುಭ ಮುಹೂರ್ತ'ದ ಸಮಯದಲ್ಲಿ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ ಎಂದು ರಾಯ್ ಮಾಹಿತಿ ನೀಡಿದರು. 

"ವೈದಿಕ ಪುರೋಹಿತರ ಮಾರ್ಗದರ್ಶನದಲ್ಲಿ ಪಿಎಂ ನರೇಂದ್ರ ಮೋದಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್,  ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಹ್ವಾನಿತ ಅತಿಥಿಗಳು ಪ್ರಧಾನ ಮಂತ್ರಿಯ ನಿರ್ಗಮನದ ನಂತರವೇ ದೇವರ ದರ್ಶನವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಸೀಮಿತ ಆಸನ ಸಾಮರ್ಥ್ಯದ ದೃಷ್ಟಿಯಿಂದ,  ಅತಿಥಿಗಳು ನಿರ್ಧರಿಸಿದ ಸ್ಥಳಗಳಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳಬೇಕಾಗುತ್ತದೆ. ಸಮಾರಂಭ ಮುಗಿದ ನಂತರ ವಯೋವೃದ್ಧರು ಹಾಗೂ ಅಸ್ವಸ್ಥ ಅತಿಥಿಗಳು ದರ್ಶನಕ್ಕೆ ಆಗಮಿಸುವಂತೆ ಮನವಿ ಮಾಡಿದ ಅವರು, ಕಾರ್ಯಕ್ರಮಕ್ಕೆ ಆಹ್ವಾನಿತ ಅತಿಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com