ಆಂಧ್ರದಲ್ಲಿ ರೈಲು ಅಪಘಾತಕ್ಕೆ ಮಾನವ ಲೋಪ ಕಾರಣ ಸಾಧ್ಯತೆ: ಪೂರ್ವ ಕರಾವಳಿ ರೈಲ್ವೆ

ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತಕ್ಕೆ ಮಾನವ ಲೋಪವೇ ಕಾರಣವಾಗಿರಬಹುದು ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಹೇಳಿದೆ.
ಆಂಧ್ರದಲ್ಲಿ ಸಂಭವಿಸಿದ ರೈಲು ಅಪಘಾತ
ಆಂಧ್ರದಲ್ಲಿ ಸಂಭವಿಸಿದ ರೈಲು ಅಪಘಾತ

ಭುವನೇಶ್ವರ್: ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತಕ್ಕೆ ಮಾನವ ಲೋಪವೇ ಕಾರಣವಾಗಿರಬಹುದು ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಹೇಳಿದೆ.
 
ರೈಲು ಅಪಘಾತದಲ್ಲಿ 3 ಬೋಗಿಗಳು ಹಳಿ ತಪ್ಪಿದ ಪರಿಣಾಮ 8 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವಿಶಾಖಪಟ್ಟಣಂ- ರಾಯಗಢ ಪ್ಯಾಸೆಂಜರ್ ರೈಲು ಮಾನವ ದೋಷದಿಂದಾಗಿ ಸಿಗ್ನಲ್ ಮೀರಿದ್ದು, ಇದೇ ಅಪಘಾತಕ್ಕೆ ಕಾರಣವಿರಬಹುದು ಎಂದು ಇಸಿಓಆರ್ ಸಿಪಿಆರ್ ಒ ಬಿಸ್ವಜೀತ್ ಸಾಹೂ ವರದಿಗಾರರಿಗೆ ಹೇಳಿದ್ದಾರೆ.

ನಿಲುಗಡೆಗೆ ಸಿಗ್ನಲ್ ತೋರುತ್ತಿದ್ದರೂ ಅದನ್ನು ಗಮನಿಸದೇ ರೈಲು ಚಲಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಇದನ್ನೇ ಸಿಗ್ನಲ್ ಓವರ್ ಶೂಟಿಂಗ್  ಎನ್ನುತ್ತಾರೆ ಎಂದು ಸಾಹು ತಿಳಿಸಿದ್ದಾರೆ. 

ಅಪಘಾತದ ಪರಿಣಾಮವಾಗಿ ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲಿನ ಹಿಂಭಾಗದಿಂದ ಎರಡು ಕೋಚ್‌ಗಳು ಮತ್ತು ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್‌ನ ಲೊಕೊ ಹಳಿತಪ್ಪಿದೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com