ಸನಾತನ ಧರ್ಮದ ಬಗ್ಗೆ ಹೇಳಿಕೆ: ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧು

ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಯೋಧ್ಯಯ ಸಾಧು ಓರ್ವರು ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್

ಅಯೋಧ್ಯೆ: ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಯೋಧ್ಯಯ ಸಾಧು ಓರ್ವರು ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಅಯೋಧ್ಯೆಯ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ ದಾಸ್ ಅವರು ಉದಯನಿಧಿ ತಲೆಯನ್ನು ತೆಗೆದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಸನಾತನ ಧರ್ಮ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕಳೆದ 2,000 ವರ್ಷಗಳಲ್ಲಿ ಹಲವು ಧರ್ಮಗಳು ಬಂದು ನಶಿಸಿಹೋಗಿವೆ. ಭೂಮಿಯಲ್ಲಿ ನಿರಂತರವಾಗಿರುವುದು ಒಂದೇ ಅದು ಸನಾತನ ಧರ್ಮ ಎಂದು ಮಹಾಂತ್ ಪರಮಹಂಸ ದಾಸ್ ಹೇಳಿದ್ದಾರೆ. ಸನಾತನ ಧರ್ಮಕ್ಕೆ ಆದಿ ಅಂತ್ಯಗಳಿಲ್ಲ. ಸನಾತನ ಧರ್ಮವನ್ನು ಹಿಂದೆಂದೂ ನಾಶ ಮಾಡಲು ಸಾಧ್ಯವಾಗಿಲ್ಲ, ಮುಂದೆಯೂ ನಾಶ ಮಾಡಲು ಸಾಧ್ಯವಿಲ್ಲ ಎಂದು ನಾಶ ಮಾಡಲು ಯತ್ನಿಸುವವರಿಗೆ ಮಹಾಂತ್ ಪರಮಹಂಸ ದಾಸ್ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಯಾರೂ ಉದಯನಿಧಿ ತಲೆ ತರದೇ ಇದ್ದರೆ, ನಾನೇ ನನ್ನ ಕೈಗಳಿಂದ ಆ ಕೆಲಸ ಮಾಡುತ್ತೇನೆ ಡಿಎಂಕೆ ನಾಯಕನ ತಲೆ ತೆಗೆಯಲು ನಾನು ಖಡ್ಗವನ್ನು ಸಿದ್ಧಪಡಿಸಿದ್ದೇನೆ ಎಂದು ಮಹಾಂತ್ ಪರಮಹಂಸ ದಾಸ್ ಹೇಳಿದ್ದಾರೆ. ಉದಯನಿಧಿ ಬೇರೆ ಧರ್ಮಗಳ ಬಗ್ಗೆಯೂ ಹೀಗೆಯೇ ಮಾತನಾಡಲಿ ಎಂದು ಮಹಾಂತ್ ಪರಮಹಂಸ ದಾಸ್  ಸವಾಲು ಹಾಕಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com