ಮಣಿಪುರ ಹಿಂಸಾಚಾರ: ಭಾರತೀಯ ಸಂಪಾದಕರ ಸಂಘದ ವಿರುದ್ಧ ಎಫ್ ಐಆರ್ ದಾಖಲು

ಮಣಿಪುರ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸಂಪಾದಕರ ಸಂಘದ ಅಧ್ಯಕ್ಷರು ಹಾಗೂ ಮೂವರು ಸದಸ್ಯರ ವಿರುದ್ಧ ಮಣಿಪುರ ಸರ್ಕಾರ ಎಫ್ ಐ ಆರ್ ದಾಖಲಿಸಿದೆ.
ಮಣಿಪುರ ಸಿಎಂ ಬೀರನ್ ಸಿಂಗ್
ಮಣಿಪುರ ಸಿಎಂ ಬೀರನ್ ಸಿಂಗ್

ಇಂಫಾಲ್: ಮಣಿಪುರ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸಂಪಾದಕರ ಸಂಘದ ಅಧ್ಯಕ್ಷರು ಹಾಗೂ ಮೂವರು ಸದಸ್ಯರ ವಿರುದ್ಧ ಮಣಿಪುರ ಸರ್ಕಾರ ಎಫ್ ಐ ಆರ್ ದಾಖಲಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಸುಮಾರು ನಾಲ್ಕು ತಿಂಗಳಿನಿಂದ ಜನಾಂಗೀಯ ಕಲಹದಿಂದ ತತ್ತರಿಸಿರುವ ರಾಜ್ಯದಲ್ಲಿ ಇನ್ನಷ್ಟು ಘರ್ಷಣೆಗಳನ್ನು ಸೃಷ್ಟಿಸಲು ಭಾರತೀಯ ಸಂಪಾದಕರ ಸಂಘ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ಮಾಧ್ಯಮಗಳ ವರದಿಗಳು ಏಕಪಕ್ಷೀಯವಾಗಿದ್ದು, ರಾಜ್ಯ ನಾಯಕತ್ವ ಪಕ್ಷಪಾತದಿಂದ ಕೂಡಿದೆ ಎಂದು ಭಾರತೀಯ ಸಂಪಾದಕರ ಸಂಘ ಇತ್ತೀಚಿಗೆ ಆರೋಪಿಸಿತ್ತು.

ರಾಜ್ಯದಲ್ಲಿ ಇನ್ನಷ್ಟು ಘರ್ಷಣೆಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವ ಎಡಿಟರ್ಸ್ ಗಿಲ್ಡ್ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ಮೂವರು ಸದಸ್ಯರಾದ ಸೀಮಾ ಗುಹಾ, ಭರತ್ ಭೂಷಣ್ ಮತ್ತು ಸಂಜಯ್ ಕಪೂರ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದರು. 

ಜನಾಂಗೀಯ ಹಿಂಸಾಚಾರದ ಮಾಧ್ಯಮ ವರದಿಗಳನ್ನು ಅಧ್ಯಯನ ಮಾಡಲು ಕಳೆದ ತಿಂಗಳು ರಾಜ್ಯಕ್ಕೆ ಭೇಟಿ ನೀಡಿದ್ದ ಗುಹಾ, ಭೂಷಣ್ ಮತ್ತು ಕಪೂರ್, ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ಸಮುದಾಯಗಳ ಪ್ರತಿನಿಧಿಗಳನ್ನು ಭೇಟಿ ಮಾಡಬೇಕಾಗಿತ್ತು. ಆದರೆ  ಕೆಲವು ವರ್ಗಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com