G20 ಶೃಂಗಸಭೆಯು ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ: ಜೊ ಬೈಡನ್
ಈ ವರ್ಷದ G20 ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.
Published: 10th September 2023 12:23 PM | Last Updated: 10th September 2023 12:23 PM | A+A A-

ಕಳೆದ ರಾತ್ರಿ ಔತಣಕೂಟದಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿಗಳ ಜೊತೆ ಜೊ ಬೈಡನ್
ನವದೆಹಲಿ: ಈ ವರ್ಷದ G20 ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಅವರು, ಜಾಗತಿಕ ಆರ್ಥಿಕತೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಅತಿಕ್ರಮಿಸುವ ಆಘಾತಗಳಿಂದ ಬಳಲುತ್ತಿರುವ ಕ್ಷಣದಲ್ಲಿ, ಈ ವರ್ಷದ ಜಿ20 ಶೃಂಗಸಭೆಯು ಇನ್ನೂ ನಮ್ಮ ಅತಿ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ಸಾಬೀತುಪಡಿಸಿದೆ ಎಂದಿದ್ದಾರೆ.
From day one, I have delivered on the most ambitious climate and conservation agenda in our country’s history. But there is more to do, and we will continue to take bold action to meet the urgency of the climate crisis and to protect our lands and waters for generations to come.
— Joe Biden (@JoeBiden) September 9, 2023
ಈ ವರ್ಷದ ಶೃಂಗಸಭೆಯಲ್ಲಿ ದೆಹಲಿ ಘೋಷಣೆಯನ್ನು ಅಂಗೀಕರಿಸಲಾಯಿತು. ಪ್ರಾದೇಶಿಕ ಸಮಗ್ರತೆ, ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ರಾಷ್ಟ್ರಗಳಿಗೆ ಕರೆ ನೀಡಲಾಯಿತು,
ಈ ಘೋಷಣೆಯು ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದವನ್ನು ಕಲ್ಪಿಸುತ್ತದೆ, ಇದು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿಯ ಮೇಲಿನ ಉನ್ನತ ಮಟ್ಟದ ತತ್ವಗಳು, ಹೈಡ್ರೋಜನ್‌ನ ಸ್ವಯಂಪ್ರೇರಿತ ತತ್ವಗಳು, ಸುಸ್ಥಿರ ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಗಾಗಿ ಚೆನ್ನೈ ತತ್ವಗಳು ಮತ್ತು ಆಹಾರ ಭದ್ರತೆ ಮತ್ತು ಪೋಷಣೆಯ ಮೇಲಿನ ತತ್ವಗಳನ್ನು ಅನುಮೋದಿಸುತ್ತದೆ.
ಚೀನಾ ಮತ್ತು ರಷ್ಯಾ ಒಪ್ಪಂದದ ಜೊತೆಗೆ 100 ಪ್ರತಿಶತ ಒಮ್ಮತದೊಂದಿಗೆ ಘೋಷಣೆಯ ಎಲ್ಲಾ 83 ಪ್ಯಾರಾಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮೊದಲ ಬಾರಿಗೆ, ಘೋಷಣೆಯು ಅಡಿಟಿಪ್ಪಣಿ ಅಥವಾ ಅಧ್ಯಕ್ಷರ ಸಾರಾಂಶವನ್ನು ಒಳಗೊಂಡಿಲ್ಲ.