ಜಿ 20 ಶೃಂಗಸಭೆ ಮುಗಿದ ನಂತರವೂ ಸೌದಿ ರಾಜಕುಮಾರ ನವದೆಹಲಿಯಲ್ಲಿಯೇ ತಂಗಿದ್ದು ಏತಕ್ಕೆ?
ಭಾರತ ಯಶಸ್ವಿಯಾಗಿ ಆಯೋಜಿಸಿದ್ದ ಜಿ 20 ಶೃಂಗಸಭೆ ನಿನ್ನೆ ಮಧ್ಯಾಹ್ನ ಮುಗಿದ ನಂತರವೂ ನವದೆಹಲಿಯಲ್ಲಿ ಉಳಿದುಕೊಂಡಿರುವ ಕೆಲವೇ ರಾಷ್ಟ್ರಗಳ ಮುಖ್ಯಸ್ಥರಲ್ಲಿ ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಕೂಡಾ ಒಬ್ಬರಾಗಿದ್ದಾರೆ. ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
Published: 11th September 2023 01:24 PM | Last Updated: 11th September 2023 09:16 PM | A+A A-

ಸೌದಿ ರಾಜಕುಮಾರನ ಜೊತೆಗೆ ಪ್ರಧಾನಿ ಮೋದಿ
ನವದೆಹಲಿ: ಭಾರತ ಯಶಸ್ವಿಯಾಗಿ ಆಯೋಜಿಸಿದ್ದ ಜಿ 20 ಶೃಂಗಸಭೆ ನಿನ್ನೆ ಮಧ್ಯಾಹ್ನ ಮುಗಿದ ನಂತರವೂ ನವದೆಹಲಿಯಲ್ಲಿ ಉಳಿದುಕೊಂಡಿರುವ ಕೆಲವೇ ರಾಷ್ಟ್ರಗಳ ಮುಖ್ಯಸ್ಥರಲ್ಲಿ ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಕೂಡಾ ಒಬ್ಬರಾಗಿದ್ದಾರೆ. ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಉಭಯ ನಾಯಕರು ಕಾರ್ಯತಂತ್ರ ಪಾಲುದಾರಿಕೆ ಮಂಡಳಿಯ ಮೊದಲ ನಾಯಕರ ಸಭೆಯ ಸಹ-ಅಧ್ಯಕ್ಷರಾಗಿದ್ದು, ರಾಜಕೀಯ, ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಕಾರ ಸಮಿತಿ, ಆರ್ಥಿಕತೆ ಮತ್ತು ಹೂಡಿಕೆ ಸಹಕಾರ ಸಮಿತಿಯ ಪ್ರಗತಿ ಪರಾಮರ್ಶೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಜಕೀಯ, ಭದ್ರತೆ, ರಕ್ಷಣೆ, ವ್ಯಾಪಾರ ಮತ್ತು ಆರ್ಥಿಕತೆ. ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಅಂಶಗಳನ್ನು ಉಭಯ ನಾಯಕರು ಚರ್ಚಿಸಿದರು. ಸೌದಿ ರಾಜಕುಮಾರ್ ಜೊತೆಗೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ಮಾಹಿತಿ ನೀಡಲಾಗಿದೆ.
Prime Minister Narendra Modi and Crown Prince & PM of the Kingdom of Saudi Arabia, Prince Mohammed bin Salman held the first Leaders’ Meeting of the India- Saudi Arabia Strategic Partnership Council.
"Agenda included a broad range of areas of bilateral cooperation including… pic.twitter.com/EdL4qDnXCE— ANI (@ANI) September 11, 2023
ಪ್ರಧಾನಿ ಮೋದಿ ಭೇಟಿಗೂ ಮುನ್ನಾ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೌದಿ ಅರೇಬಿಯಾದ ಯುವರಾಜನನ್ನು ಔಪಚಾರಿಕವಾಗಿ ಬರಮಾಡಿಕೊಂಡರು. ಮೂರು ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ಯಶಸ್ವಿ ಜಿ 20 ಶೃಂಗಸಭೆ ಆಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ಸೌದಿ ಅರೇಬಿಯಾ ರಾಜ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
#WATCH | Crown Prince and Prime Minister of the Kingdom of Saudi Arabia Prince Mohammed bin Salman bin Abdulaziz Al Saud attends a ceremonial reception at Rashtrapati Bhavan.
— ANI (@ANI) September 11, 2023
He also met President Droupadi Murmu, Prime Minister Narendra Modi and other ministers during the… pic.twitter.com/HWET5vsmB1
ಶನಿವಾರ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ, ಭಾರತ, ಯುನೈಟೆಡ್ ಸ್ಟೇಟ್ಸ್, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ಯೂನಿಯನ್ ಮೆಗಾ ಭಾರತ-ಮಧ್ಯಪ್ರಾಚ್ಯ-ಯುರೋಪ್ ಹಡಗು ಮತ್ತು ರೈಲ್ವೆ ಸಂಪರ್ಕ ಕಾರಿಡಾರ್ ಪ್ರಾರಂಭಿಸುವ ಐತಿಹಾಸಿಕ ಒಪ್ಪಂದವನ್ನು ಘೋಷಿಸಿದವು.