ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ತಮ್ಮ ಪ್ರಭಾವ ಬಳಸಿ ಪತ್ನಿಗೆ 10 ಕೋಟಿ ರೂ. ಸಬ್ಸಿಡಿ ಕೊಡಿಸಿದ್ದಾರೆ: ಕಾಂಗ್ರೆಸ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧದ ಭೂ ಹಗರಣದ ಆರೋಪಗಳನ್ನು ಬುಧವಾರ ತಳ್ಳಿಹಾಕಿದ್ದಾರೆ. ಭೂಮಿ ಖರೀದಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆದಿಲ್ಲ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
ರಿನಿಕಿ ಶರ್ಮಾ-ಹಿಮಂತ ಬಿಸ್ವಾ ಶರ್ಮಾ
ರಿನಿಕಿ ಶರ್ಮಾ-ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧದ ಭೂ ಹಗರಣದ ಆರೋಪಗಳನ್ನು ಬುಧವಾರ ತಳ್ಳಿಹಾಕಿದ್ದಾರೆ. ಭೂಮಿ ಖರೀದಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆದಿಲ್ಲ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. 

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು Instagram ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತೀಯ ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ತಮ್ಮ ಪತ್ನಿಯ ಸಂಸ್ಥೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಭಾಗವಾಗಿ 10 ಕೋಟಿ ರೂಪಾಯಿಯನ್ನು ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ಗೊಗೋಯ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನನ್ನ ಪತ್ನಿ ಅಥವಾ ಅವಳು ಸಂಬಂಧ ಹೊಂದಿರುವ ಕಂಪನಿಯು ಭಾರತ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯಧನವನ್ನು ಪಡೆದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ಸ್ ಮೀಡಿಯಾ ಗ್ರೂಪ್‌ನ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಿನಿಕಿ ಭುಯಾನ್ ಶರ್ಮಾ ಅವರು ಎರಡು ವರ್ಷಗಳ ಹಿಂದೆ ಹಿಮಂತ ಮುಖ್ಯಮಂತ್ರಿಯಾದ ನಂತರ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ದರ್ಗಾಜಿ ಗ್ರಾಮದಲ್ಲಿ 50 ಬಿಘಾ ಎರಡು ಕಟ್ಟೆ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು.

ಆರ್‌ಟಿಐ ವರದಿಯನ್ನು ಉಲ್ಲೇಖಿಸಿ, ಸೀಲಿಂಗ್ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ 49.5 ಬಿಘಾಗಳಿಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದುವಂತಿಲ್ಲ. ಆದರೆ ಮುಖ್ಯಮಂತ್ರಿಯವರ ಪತ್ನಿ ಭೂಮಿಯನ್ನು ಖರೀದಿಸಿದ ನಂತರ ಅದನ್ನು ಕೈಗಾರಿಕಾ ಭೂಮಿ ಎಂದು ಬದಲಾಯಿಸಲಾಗಿದೆ ಎಂದು ಆರೋಪವಿದೆ.

ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಕೂಡ ಅಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯಿಂದ 10 ಕೋಟಿ ರೂಪಾಯಿ ಸರ್ಕಾರದ ನೆರವು ಪಡೆದಿದೆ ಎಂದು ಆರೋಪಿಸಲಾಗಿದೆ. ಕೇವಲ 10 ತಿಂಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡಿದೆ. ರಿನಿಕಿ ಭೂಯಾನ್ ಶರ್ಮಾ ಅವರ ಕಂಪನಿಯು ಹಲವಾರು ಸುದ್ದಿ ಮತ್ತು ಮನರಂಜನಾ ವಾಹಿನಿಗಳು, ಚಹಾ ತೋಟಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಶಾಲೆಗಳು ಮತ್ತು ಪತ್ರಿಕೆಗಳನ್ನು ನಡೆಸುತ್ತದೆ ಮತ್ತು ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ.

ಮತ್ತೊಂದೆಡೆ, ಅಸ್ಸಾಂ ಸಿಎಂ ಪತ್ನಿ ನಡೆಸುತ್ತಿರುವ ಕಂಪನಿಗೆ ರೈತರ ಹಕ್ಕುಗಳಿಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಲಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ರೈತರ ಹಣ ದುಪ್ಪಟ್ಟು ಮಾಡುವ ಮಾದರಿ ಇದೇನಾ? ನಮ್ಮ ದೇಶದ ರೈತ ವ್ಯವಸಾಯದಿಂದ ದಿನಕ್ಕೆ 27 ರೂಪಾಯಿ ಗಳಿಸುತ್ತಿದ್ದು, ಇನ್ನೊಂದೆಡೆ ಕಿಸಾನ್ ಸಂಪದ ಯೋಜನೆಯಡಿ 10 ಕೋಟಿ ಅನುದಾನ ನೀಡಲಾಗುತ್ತದೆ. ದೇಶದ ಉಳಿದ ಭಾಗಗಳಿಗೆ ಇಂತಹ ಸೌಲಭ್ಯ ಯಾವಾಗ ಸಿಗುತ್ತದೆ? ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com