ನೊಯ್ಡಾ ಲಿಫ್ಟ್ ಕುಸಿತ ದುರಂತ: ಮತ್ತೆ ನಾಲ್ವರು ಕಾರ್ಮಿಕರ ಸಾವು, ಮೃತರ ಸಂಖ್ಯೆ 8ಕ್ಕೆ ಏರಿಕೆ
ನೊಯ್ಡಾ ಎಕ್ಟೆನ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸೊಸೈಟಿಯಲ್ಲಿ ಸರ್ವಿಸ್ ಲಿಫ್ಟ್ ಕುಸಿದು ಬಿದ್ದು ಅದರಲ್ಲಿ ಸಿಕ್ಕಿಹಾಕಿಕೊಂಡು ತೀವ್ರ ಗಾಯಗೊಂಡಿದ್ದ ಮತ್ತೆ ನಾಲ್ವರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
Published: 16th September 2023 01:33 PM | Last Updated: 16th September 2023 01:33 PM | A+A A-

ನಿರ್ಮಾಣ ಹಂತದಲ್ಲಿರುವ ನೊಯ್ಡಾ ಲಿಫ್ಟ್ ಕುಸಿತ
ನೋಯ್ಡಾ: ನೊಯ್ಡಾ ಎಕ್ಟೆನ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸೊಸೈಟಿಯಲ್ಲಿ ಸರ್ವಿಸ್ ಲಿಫ್ಟ್ ಕುಸಿದು ಬಿದ್ದು ಅದರಲ್ಲಿ ಸಿಕ್ಕಿಹಾಕಿಕೊಂಡು ತೀವ್ರ ಗಾಯಗೊಂಡಿದ್ದ ಮತ್ತೆ ನಾಲ್ವರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಗ್ರೇಟರ್ ನೋಯ್ಡಾ (ಪಶ್ಚಿಮ) ಎಂದು ಕರೆಯಲ್ಪಡುವ ನೋಯ್ಡಾ ಎಕ್ಸ್ಟೆನ್ಷನ್ ನಲ್ಲಿರುವ ಆಮ್ರಪಾಲಿ ಡ್ರೀಮ್ ವ್ಯಾಲಿ ಪ್ರಾಜೆಕ್ಟ್ ಸೈಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಟವರ್ ನ 14 ನೇ ಮಹಡಿಯಿಂದ ಲಿಫ್ಟ್ ಬಿದ್ದಾಗ ಅದರಲ್ಲಿ ಒಂಬತ್ತು ಕೆಲಸಗಾರರು ಇದ್ದರು.
ಬಹುಕಾಲದಿಂದ ಸ್ಥಗಿತಗೊಂಡಿದ್ದ ಯೋಜನೆಯನ್ನು ರಾಜ್ಯ ಸರ್ಕಾರದ ಎನ್‌ಬಿಸಿಸಿ ಪೂರ್ಣಗೊಳಿಸುವ ಕಾರ್ಯ ಮಾಡುತ್ತಿದೆ. ಇಂದು ಇನ್ನೂ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಐವರು ಗಂಭೀರ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದು ಅವರಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ಹೇಳಿದ್ದಾರೆ.
ಸ್ಥಳೀಯ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿ ವಿರುದ್ಧ ನಿರ್ಲಕ್ಷ್ಯ ಮತ್ತು ಅಪರಾಧಿ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಸ್ಥಳೀಯ ಗ್ರೇಟರ್ ನೋಯ್ಡಾ ಪ್ರಾಧಿಕಾರ ಕೂಡ ಘಟನೆಯ ತನಿಖೆ ಆರಂಭಿಸಿದೆ.