ಪಿಎಂ ಮೋದಿ
ಪಿಎಂ ಮೋದಿ

'ಅವರ ಮಧ್ಯರಾತ್ರಿಯ ಭಾಷಣ ನಮಗೆ ಸ್ಪೂರ್ತಿ ನೀಡಿತ್ತು': ಹಳೆ ಸಂಸತ್ತಿನಲ್ಲಿ ಕೊನೆಯ ಭಾಷಣದಲ್ಲಿ ನೆಹರೂ ಭಾಷಣ ಸ್ಮರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನೆನಪಿಸಿಕೊಂಡಿದ್ದಾರೆ. ಹಳೇ ಸಂಸತ್ತಿನ ಭವನದಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನೆನಪಿಸಿಕೊಂಡಿದ್ದಾರೆ. ಹಳೇ ಸಂಸತ್ತಿನ ಭವನದಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂಡಿತ್ ನೆಹರು ಅವರು 'ಸ್ಟ್ರೋಕ್ ಆಫ್ ಮಿಡ್ನೈಟ್ ಅವರ್' ನಲ್ಲಿ ಮಾತನಾಡಿದ್ದು ಈ ಸಂಸತ್ತಿನಲ್ಲಿ ಎಲ್ಲರಿಗೂ ಸ್ಫೂರ್ತಿ ನೀಡುತ್ತಿದೆ ಎಂದು ಶ್ಲಾಘಿಸಿದ್ದಾರೆ. 

ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಅವರನ್ನು ಸ್ಮರಿಸಿದ ಮೋದಿ, "ಈ ಸಂಸತ್ತು ಮೂವರು ಪ್ರಧಾನಿಗಳನ್ನು ಕಳೆದುಕೊಂಡಾಗ - ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರಿಗೆ  ಸೂಕ್ತ ಗೌರವವನ್ನು ನೀಡಲಾಯಿತು.

ನೆಹರೂ ಅವರಿಂದ ಶಾಸ್ತ್ರಿಯವರಿಂದ ವಾಜಪೇಯಿಯವರವರೆಗೆ ಹಲವಾರು ನಾಯಕರು ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸುವುದನ್ನು ಈ ಸಂಸತ್ತು ನೋಡಿದೆ ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.

ಸಂಸತ್‌ನಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಮಧ್ಯರಾತ್ರಿಯ ಭಾಷಣ ಈಗಲೂ ಪ್ರತಿಧ್ವನಿಸುತ್ತಿದೆ. ಅದು ನಮಗೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ ಎಂದ ನರೇಂದ್ರ ಮೋದಿ, ಈ ಸದನದಲ್ಲಿಯೇ ಅಟಲ್ ಬಿಹಾರಿ ವಾಜಪೇಯಿ ಅವರು, ‘ಸರ್ಕಾರೇನ್ ಆಯೇಗಿ-ಜಾಯೇಗಿ, ಪಾರ್ಟಿಯೇನ್ ಬನೇಗಿ-ಬಿಗ್ಡೇಗಿ, ಲೇಕಿನ್. ಯೇ ದೇಶ್ ರೆಹನಾ ಚಾಹಿಯೇ ಎಂದು. ಇದು ಇಂದಿಗೂ ಪ್ರತಿಧ್ವನಿಸುತ್ತದೆ ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com