ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದಿಂದ ಬೆದರಿದ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಬುಕ್‌ಮೈಶೋ, ಖಲಿಸ್ತಾನಿ ಬೆಂಬಲಿತ ಪಂಜಾಬಿ-ಕೆನಡಾ ಗಾಯಕ ಶುಭನೀತ್ ಸಿಂಗ್ ಅವರ ಭಾರತ ಪ್ರವಾಸವನ್ನು ರದ್ದುಗೊಳಿಸಿದೆ.
ಸೆಪ್ಟೆಂಬರ್ 23 ರಿಂದ ಸಂಗೀತ ಕಾರ್ಯಕ್ರಮಕ್ಕಾಗಿ ಭಾರತ ಪ್ರವಾಸ ಕೈಗೊಳ್ಳಬೇಕಿದ್ದ ಶುಭನೀತ್ ಸಿಂಗ್ ವಿರುದ್ಧ ತೀವ್ರ ಪ್ರತಿಭಟನೆಗಳು ಆರಂಭಗೊಂಡಿದ್ದವು. ಖಲಿಸ್ತಾನ ಬೆಂಬಲಿಸಿದ ಕಾರಣ, ಈ ಕಾರ್ಯಕ್ರಮ ಆಯೋಜಿಸಿ ಟಿಕೆಟ್ ವಿತರಿಸುತ್ತಿದ್ದ ಬುಕ್‌ಮೈಶೋ ವಿರುದ್ಧವೂ ಪ್ರತಿಭಟನೆ ವ್ಯಕ್ತವಾಗಿತ್ತು. ಹೀಗಾಗಿ ಶುಭನೀತ್ ಕಾರ್ಯಕ್ರಮ ರದ್ದುಗೊಳಿಸಿದ ಬುಕ್‌ಮೈಶೋ, 7-10 ದಿನಗಳಲ್ಲಿ ಸಂಪೂರ್ಣ ಹಣ ಮರುಪಾವತಿ ಮಾಡುವುದಾಗಿ ಟ್ವೀಟ್ ಮಾಡಿದೆ.
"ಗಾಯಕ ಶುಭನೀತ್ ಸಿಂಗ್ ಅವರ ಸ್ಟಿಲ್ ರೋಲಿನ್ ಟೂರ್ ಫಾರ್ ಇಂಡಿಯಾ ರದ್ದಾಗಿದೆ. ಆ ನಿಟ್ಟಿನಲ್ಲಿ, ಬುಕ್‌ಮೈಶೋ ಪ್ರದರ್ಶನಕ್ಕಾಗಿ ಟಿಕೆಟ್ ಖರೀದಿಸಿದ ಎಲ್ಲಾ ಗ್ರಾಹಕರಿಗೆ ಸಂಪೂರ್ಣ ಹಣ ಮರುಪಾವತಿಸುವುದಾಗಿ ಬುಕ್ ಮೈಶೋ ತಿಳಿಸಿದೆ.
ಸೆಪ್ಟೆಂಬರ್ 23 ರಿಂದ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಶುಭ್ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿತ್ತು.
Advertisement