ಮಹಿಳಾ ಮೀಸಲಾತಿ ಮಸೂದೆ: ಹೆಚ್ಚಿನ ಅನುಪಾತದಲ್ಲಿ ಮಹಿಳಾ ಸಂಸದರಿರುವ ದೇಶಗಳ ಪಕ್ಷಗಳಲ್ಲೂ ಇವೆ ಮೀಸಲಾತಿ!
ಲೋಕಸಭೆಗೆ ಮಹಿಳಾ ಮೀಸಲಾತಿ ನೀಡುವ ಮಸೂದೆಯ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಯುತ್ತಿರುವಾಗ, ಅಧ್ಯಯನ ವರದಿಯೊಂದು ಬೇರೆ ಬೇರೆ ದೇಶಗಳಲ್ಲಿ ಈ ವಿಷಯದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.
Published: 20th September 2023 10:27 PM | Last Updated: 21st September 2023 08:25 PM | A+A A-

ಮಹಿಳಾ ಮೀಸಲಾತಿ ಮಸೂದೆ
ನವದೆಹಲಿ: ಲೋಕಸಭೆಗೆ ಮಹಿಳಾ ಮೀಸಲಾತಿ ನೀಡುವ ಮಸೂದೆಯ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಯುತ್ತಿರುವಾಗ, ಅಧ್ಯಯನ ವರದಿಯೊಂದು ಬೇರೆ ಬೇರೆ ದೇಶಗಳಲ್ಲಿ ಈ ವಿಷಯದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.
ಹೆಚ್ಚಿನ ಅನುಪಾತದಲ್ಲಿ ಮಹಿಳಾ ಪ್ರತಿನಿಧಿಗಳನ್ನು ಹೊಂದಿರುವ ದೇಶದಲ್ಲಿ ಕೋಟಾವನ್ನು ಕಡ್ಡಾಯಗೊಳಿಸಿರುವ ಕಾನೂನುಗಳಿಲ್ಲ. ಆದರೆ ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿಯೇ ಮೀಸಲಾತಿ ಇರುತ್ತವೆ ಎಂಬುದು ಈ ಥಿಂಕ್ ಟ್ಯಾಂಕ್ ಅಧ್ಯಯನ ವರದಿಯ ಸಾರಾಂಶವಾಗಿದೆ.
ಪಿಆರ್ ಎಸ್ ಶಾಸಕಾಂಗ ಸಂಶೋಧನೆಯ ವರದಿಯ ಪ್ರಕಾರ, ಸ್ವೀಡನ್ ನಂತಹ ರಾಷ್ಟ್ರಗಳಲ್ಲಿ ಜನಪ್ರತಿನಿಧಿಗಳ ಪೈಕಿ ಶೇ.46 ರಷ್ಟು ಮಹಿಳೆಯರಿದ್ದಾರೆ. ನಾರ್ವೇ ಯಲ್ಲಿ ಶೇ.46, ದಕ್ಷಿಣ ಆಫ್ರಿಕಾದಲ್ಲಿ ಶೇ.45, ಆಸ್ಟ್ರೇಲಿಯಾದಲ್ಲಿ ಶೇ.38 ರಷ್ಟು ಪ್ರಮಾಣದಲ್ಲಿ ಮಹಿಳೆಯರಿದ್ದರೆ, ಫ್ರಾನ್ಸ್ (ಶೇ.35) ಜರ್ಮನಿ ಶೇ.35 ರಷ್ಟಿದ್ದಾರೆ. ಆದರೆ ಇಲ್ಲಿ ಮೀಸಲಾತಿಗೆ ಕಾನೂನು ಇಲ್ಲ. ಆದಾಗ್ಯೂ ಅಲ್ಲಿನ ರಾಜಕೀಯ ಪಕ್ಷಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.
ಶೇ.21 ರಷ್ಟು ಮಹಿಳಾ ಸಂಸದರನ್ನು ಹೊಂದಿರುವ ಬಾಂಗ್ಲಾದೇಶದಲ್ಲಿ ಮಹಿಳೆಯರಿಗೆ ಮೀಸಲಾತಿ ಇದ್ದು 300 ಸ್ಥಾನಗಳ ಪೈಕಿ 50 ನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸುವುದರಿಂದ ಜನರಿಗೆ ಆಯ್ಕೆಗಳೂ ಸೀಮಿತಗೊಳ್ಳುತ್ತವೆ ಎಂದು ಅಧ್ಯಯನ ವರದಿ ಹೇಳಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ; ನಾಳೆ ರಾಜ್ಯಸಭೆಯಲ್ಲಿ ಮಂಡನೆ ಸಾಧ್ಯತೆ
ಥಿಂಕ್ ಟ್ಯಾಂಕ್ ನ ಪ್ರಕಾರ, ತಜ್ಞರು ರಾಜಕೀಯ ಪಕ್ಷಗಳಲ್ಲಿನ ಮೀಸಲಾತಿ ಪರ್ಯಾಯವಾಗಿ ಅಥವಾ ದ್ವಿಸದಸ್ಯ ಕ್ಷೇತ್ರಗಳನ್ನು ಹೊಂದಿರುವ ವ್ಯವಸ್ಥೆಯಾಗಿ ಸೂಚಿಸುತ್ತಾರೆ.
17 ನೇ ಲೋಕಸಭೆಯ ಒಟ್ಟು ಸದಸ್ಯರಲ್ಲಿ ಸುಮಾರು 15 ಪ್ರತಿಶತದಷ್ಟು ಮಹಿಳೆಯರಿದ್ದರು. ಆದರೆ ದೇಶದ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಸರಾಸರಿ ಒಟ್ಟು ಸದಸ್ಯರಲ್ಲಿ ಕೇವಲ 9 ಪ್ರತಿಶತ ಇದೆ. ರಾಜ್ಯಸಭಾ ಸಂಸದರಲ್ಲಿ ಸುಮಾರು 13 ಪ್ರತಿಶತ ಮಹಿಳೆಯರಿದ್ದಾರೆ.
ರಾಜಕೀಯ ಪಕ್ಷಗಳನ್ನು ಪರಿಗಣಿಸಿದಾಗ, ಬಿಜೆಡಿ ಸಂಸದರಲ್ಲಿ ಶೇಕಡಾ 42 ಮತ್ತು ಟಿಎಂಸಿ ಸಂಸದರಲ್ಲಿ ಶೇಕಡಾ 39 ರಷ್ಟು ಮಹಿಳೆಯರಿದ್ದರೆ. ಬಿಜೆಪಿ ಶೇ.14 ಹಾಗೂ ಕಾಂಗ್ರೆಸ್ ಶೇ.12 ಮಹಿಳಾ ಸಂಸದರನ್ನು ಹೊಂದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಡಿ ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲೋಕಸಭೆಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷಗಳಾದ್ಯಂತ, ಪುರುಷರಂತೆ ಮಹಿಳೆಯರೂ ಗೆಲ್ಲುವ ಸಾಧ್ಯತೆಯಿದೆ ಎಂದು ಪಿಆರ್ ಎಸ್ ವರದಿ ಹೇಳಿದೆ.