ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ಬಿಜೆಪಿ ಸಂಸದ ಬಿಧುರಿಗೆ ಶೋಕಾಸ್ ನೋಟಿಸ್
ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಸ್ಲಿಂ ಸಂಸದ, ಕುನ್ವರ್ ಡ್ಯಾನಿಶ್ ಅಲಿ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರಿಗೆ ಕೇಸರಿ ಪಕ್ಷ ಶುಕ್ರವಾರ ಶೋಕಾಸ್ ನೋಟಿಸ್...
Published: 22nd September 2023 05:54 PM | Last Updated: 22nd September 2023 05:54 PM | A+A A-

ರಮೇಶ್ ಬಿಧುರಿ - ಡ್ಯಾನಿಶ್ ಅಲಿ
ನವದೆಹಲಿ: ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಸ್ಲಿಂ ಸಂಸದ, ಕುನ್ವರ್ ಡ್ಯಾನಿಶ್ ಅಲಿ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರಿಗೆ ಕೇಸರಿ ಪಕ್ಷ ಶುಕ್ರವಾರ ಶೋಕಾಸ್ ನೋಟಿಸ್ ನೀಡಿದೆ.
ಲೋಕಸಭೆಯಲ್ಲಿ ಅಸಂಸದೀಯ ಪದಗಳನ್ನು ಬಳಸಿದ್ದಕ್ಕಾಗಿ ದಕ್ಷಿಣ ದೆಹಲಿ ಸಂಸದ ಬಿಧುರಿ ಅವರಿಗೆ ಉತ್ತರ ಕೇಳಿ ಬಿಜೆಪಿ ನೋಟಿಸ್ ನೀಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನು ಓದಿ: ಲೋಕಸಭೆಯಲ್ಲಿ ಮುಸ್ಲಿಂ ಸಂಸದ ಡ್ಯಾನಿಶ್ ಅಲಿಯನ್ನು 'ಉಗ್ರ', 'ಪಿಂಪ್' ಎಂದು ನಿಂದಿಸಿದ ಬಿಜೆಪಿ ಸಂಸದ!
ಭಾರತದ ಚಂದ್ರಯಾನ-3 ರ ಯಶಸ್ಸಿನ ಚರ್ಚೆಯ ವೇಳೆ ಮಾತನಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ, ಉಗ್ರಗಾಮಿ ಮತ್ತು ಪಿಂಪ್ ಎಂದು ನಿಂದಿಸಿದ್ದರು.
ಈ 'ಮುಲ್ಲಾ' ನನ್ನು ಹೊರಹಾಕಿ. "ಈ ಮುಲ್ಲಾ ಒಬ್ಬ ಭಯೋತ್ಪಾದಕ" ಎಂದು ಬಿಧುರಿ ಟೀಕಿಸಿದ್ದಾರೆ.