ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್- ಶ್ರವಣ ದೋಷವುಳ್ಳ ವಕೀಲೆಯೊಬ್ಬರು ಸಂಕೇತ ಭಾಷೆ (ಸಂಜ್ಞೆ ಭಾಷೆ) ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಮುಂದೆ ತಮ್ಮ ಪ್ರಕರಣದ ವಾದ ಮಂಡಿಸಿದ್ದಾರೆ.
Published: 26th September 2023 01:26 PM | Last Updated: 26th September 2023 06:13 PM | A+A A-

ಮೂಕ ವಕೀಲೆ ಸಾರ ಸನ್ನಿ
ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್- ಶ್ರವಣ ದೋಷವುಳ್ಳ ವಕೀಲೆಯೊಬ್ಬರು ಸಂಕೇತ ಭಾಷೆ (ಸಂಜ್ಞೆ ಭಾಷೆ) ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಮುಂದೆ ತಮ್ಮ ಪ್ರಕರಣದ ವಾದ ಮಂಡಿಸಿದ್ದಾರೆ. ಸಾರ ಸನ್ನಿ ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿ ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದ ಮಂಡಿಸಿದ್ದಾರೆ.
ಸಾರಾ ಅವರು ತಮ್ಮ ಪ್ರಕರಣವನ್ನು ಇಂಟಪ್ರಿಟರ್ (ವ್ಯಾಖ್ಯಾನಕಾರ) ಮೂಲಕ ವಾದಿಸಲು ಅವಕಾಶ ಮಾಡಿಕೊಡಬೇಕೆಂದು ಹಿರಿಯ ವಕೀಲರಾದ ಸಂಚಿತಾ ಐನ್ ಅವರು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಮನವಿ ಮಾಡಿದರು. ಅವರು ತಕ್ಷಣವೇ ತಮ್ಮ ಒಪ್ಪಿಗೆಯನ್ನು ನೀಡಿದರು.
ವರ್ಚುಯಲ್ ಆಗಿ ವಿಚಾರಣೆ ವೇಳೆ ಸ್ಕ್ರೀನ್ ಮೇಲೆ ಬರಲು ವ್ಯಾಖ್ಯಾನಕಾರಗಷ್ಟೇ ಕಂಟ್ರೋಲ್ ರೂಮ್ ಅವಕಾಶ ಮಾಡಿಕೊಟ್ಟಿತ್ತು. ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಸಾರಾಗೂ ಅವಕಾಶ ಕೊಡಿಸಿದರು. ಇದರಿಂದ ಒಂದು ಸ್ಕ್ರೀನ್ ನಲ್ಲಿ ಸಾರಾ ವಾದ ಮಂಡಿಸಿದರೆ ಮತ್ತೊಂದು ಸ್ಕೀನ್ ನಲ್ಲಿ ವ್ಯಾಖ್ಯಾನಕಾರರು ಕಾಣಿಸಿಕೊಳ್ಳುವ ಮೂಲಕ ಆಕೆ ಮತ್ತು ಇತರರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದರು. ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ವಾದ ಮಂಡಿಸಲಾಯಿತು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ; ಇ-ಪಾಸ್ ಪೋರ್ಟಲ್ ಆರಂಭ- ಸಿಜೆಐ ಘೋಷಣೆ
ಈ ಪ್ರಕ್ರಿಯೆಯಲ್ಲಿ ವ್ಯಾಖ್ಯಾನಕಾರನನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಶಂಸಿಸಿದರು. ಸಾರಾ ಅವರ ಬದ್ಧತೆ ಹೆಚ್ಚಿನ ಅಡೆತಡೆಗಳನ್ನು ಮೀರಿದೆ. ಸಿಜೆಐ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ, "ನನ್ನ ಕೆಲಸವನ್ನು ಮಾತಿನಲ್ಲಿ ಹೇಳುವುದಿಲ್ಲ, ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದರು. ಅವರ ಬದ್ಧತೆಗೆ ಅನುಗುಣವಾಗಿ, ಅವರು ನ್ಯಾಯವಾದಿ ಎಸ್ ಆರ್ ಭಟ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು.
ಈ ಸಮಿತಿಯ ಧ್ಯೇಯ ಸರ್ವೋಚ್ಚ ನ್ಯಾಯಾಲಯದ ಆವರಣ ಮತ್ತು ಅದರ ಕಾರ್ಯಾಚರಣೆಗಳ ಸಮಗ್ರ ಪ್ರವೇಶದ ಪರಿಶೋಧನೆ ನಡೆಸುವುದಾಗಿತ್ತು. ಅಲ್ಲದೇ, ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡುವ ದಿವ್ಯಾಂಗರನ್ನು ತಲುಪುವುದು, ಅವರ ಪ್ರತಿಕ್ರಿಯೆಯನ್ನು ಕೇಳುವುದು ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ನಿರ್ಣಯಿಸುವುದನ್ನು ಸಮಿತಿ ಒಳಗೊಂಡಿರುತ್ತದೆ.
ಈ ಉಪಕ್ರಮದ ಅಂತಿಮ ಗುರಿಯು ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದೊಂದಿಗಿನ ಅವರ ಸಂವಾದದಲ್ಲಿ ದಿವ್ಯಾಂಗರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುವುದಾಗಿದೆ.