ಡ್ಯಾನಿಶ್ ಅಲಿ ವಿರುದ್ಧ ಸಂಸತ್ ನಲ್ಲಿ ವಾಗ್ದಾಳಿ ನಡೆಸಿದ್ದ ಬಿಜೆಪಿ ನಾಯಕ ರಮೇಶ್ ಬಿಧುರಿಗೆ ಚುನಾವಣಾ ಜವಾಬ್ದಾರಿ
ಬಿಎಸ್ ಪಿ ಸಂಸದ ಡ್ಯಾನಿಶ್ ಅಲಿಯನ್ನು ಲೋಕಸಭೆಯಲ್ಲಿ ಅವಮಾನಕರ ರೀತಿಯಲ್ಲಿ ನಿಂದಿಸಿದ ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣೆಯ ಹೊಣೆಗಾರಿಕೆ ನೀಡಲಾಗಿದೆ.
Published: 28th September 2023 01:05 AM | Last Updated: 28th September 2023 01:55 PM | A+A A-

ರಾಜಸ್ಥಾನ ಬಿಜೆಪಿ ಸಭೆಯಲ್ಲಿ ರಮೇಶ್ ಬಿಧುರಿ
ನವದೆಹಲಿ: ಬಿಎಸ್ ಪಿ ಸಂಸದ ಡ್ಯಾನಿಶ್ ಅಲಿಯನ್ನು ಲೋಕಸಭೆಯಲ್ಲಿ ಅವಮಾನಕರ ರೀತಿಯಲ್ಲಿ ನಿಂದಿಸಿದ ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣೆಯ ಹೊಣೆಗಾರಿಕೆ ನೀಡಲಾಗಿದೆ.
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಟೊಂಕ್ ಜಿಲ್ಲೆಯ ಜವಾಬ್ದಾರಿಯನ್ನು ರಮೇಶ್ ಬಿಧುರಿಗೆ ವಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನನ್ನ ಮೇಲೆ ಸಾಮೂಹಿಕ ಹಲ್ಲೆಗೆ ವೇದಿಕೆ ಸೃಷ್ಟಿಸಲಾಗುತ್ತಿದೆ: ಬಿಜೆಪಿ ನಾಯಕನ ಪತ್ರದ ಬಗ್ಗೆ ಸಂಸದ ಡ್ಯಾನಿಶ್ ಅಲಿ
ಈ ಕ್ಷೇತ್ರದಲ್ಲಿ ಗುರ್ಜರ್ ಸಮುದಾಯ ಪ್ರಬಲವಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ ಈ ಪೈಕಿ ಒಂದರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸಹ ಸ್ಪರ್ಧಿಸುತ್ತಾರೆ. ಬಿಜೆಪಿಯ ಪ್ರಕಾರ ಗುರ್ಜರ್ ಸಮುದಾಯದವರೇ ಆದ ಬಿಧುರಿ ಮತಗಳನ್ನು ಸೆಳೆಯಬಲ್ಲರು ಎಂಬ ಲೆಕ್ಕಾಚಾರವಿದೆ. ಸಚಿನ್ ಪೈಲಟ್ ಸಹ ಗುರ್ಜರ್ ಸಮುದಾಯದವರೇ ಆಗಿರುವುದು ಗಮನಾರ್ಹ ಸಂಗತಿ.