ರಾಹುಲ್ ಗಾಂಧಿ ಆಸ್ತಿ ಎಷ್ಟು ಗೊತ್ತೇ?: ಪ್ರಿಯಾಂಕ ಜೊತೆ ಭೂಮಿ, ಗುರುಗ್ರಾಮ ಕಚೇರಿ ಹಂಚಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯಾನಾಡ್ ನಿಂದ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರಗಳನ್ನು ಘೋಷಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯಾನಾಡ್ ನಿಂದ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರಗಳನ್ನು ಘೋಷಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ನೀಡಿರುವ ಮಾಹಿತಿಯ ಪ್ರಕಾರ, 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದಾರೆ.

ಫ್ಲ್ಯಾಟ್, ವಾಹನವನ್ನು ರಾಹುಲ್ ಗಾಂಧಿ ಹೊಂದಿಲ್ಲ. 9.24 ಕೋಟಿ ಚರಾಸ್ತಿ, 55,000 ರೂ ನಗದು, 26.25 ಲಕ್ಷ ಬ್ಯಾಂಕ್ ಠೇವಣಿ. 4.33 ಕೋಟಿ ರೂಪಾಯಿಯಷ್ಟು ಬಾಂಡ್ ಹಾಗೂ ಷೇರುಗಳು, 3.81 ಕೋಟಿ ರೂಪಾಯಿಯಷ್ಟು ಮ್ಯೂಚುಯಲ್ ಫಂಡ್ಸ್, 15.21 ಲಕ್ಷ ರೂಪಾಯಿ ಗೋಲ್ಡ್ ಬಾಂಡ್ ಹಾಗೂ 4.20 ಲಕ್ಷ ರೂಪಾಯಿ ಚಿನ್ನಾಭರಣಗಳನ್ನು ರಾಹುಲ್ ಗಾಂಧಿ ಹೊಂದಿದ್ದಾರೆ.

ರಾಹುಲ್ ಗಾಂಧಿ
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ₹ 11.15 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವುಗಳಲ್ಲಿ ದೆಹಲಿಯ ಮೆಹ್ರೌಲಿಯಲ್ಲಿ ಅವರು ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹ-ಮಾಲೀಕತ್ವದ ಕೃಷಿ ಭೂಮಿಯೂ ಇದೆ. ರಾಹುಲ್ ಗಾಂಧಿ ಅವರು ಗುರುಗ್ರಾಮ್‌ನಲ್ಲಿ ಕಚೇರಿ ಸ್ಥಳವನ್ನು ಹೊಂದಿದ್ದು ಅದಕ್ಕೆ ಪ್ರಸ್ತುತ ₹ 9 ಕೋಟಿಗೂ ಹೆಚ್ಚು ಮೌಲ್ಯವಿದೆ. ಕೃಷಿ ಭೂಮಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ನಮೂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com