ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ತೆರಿಗೆ ಪದ್ಧತಿಯಲ್ಲಿ ಪ್ರಮುಖ ಸುಧಾರಣೆಯ ಭರವಸೆ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆ ತರುವ ಭರವಸೆ ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ತೆರಿಗೆ ಪದ್ಧತಿಯಲ್ಲಿ ಪ್ರಮುಖ ಸುಧಾರಣೆ ತರುವ ಭರವಸೆ ನೀಡಿದೆ.

ತೆರಿಗೆ ಪದ್ಧತಿ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರುವುದಾಗಿ ಕಾಂಗ್ರೆಸ್ ಹೇಳಿದ್ದು, ಕಳೆದ ಒಂದು ದಶಕದಲ್ಲಿ ಒಟ್ಟಾರೆ ತೆರಿಗೆ-ಜಿಡಿಪಿ ಹೆಚ್ಚಾಗಿಲ್ಲ. ಹೆಚ್ಚಿದ ಖರ್ಚಿಗೆ ಸ್ವಲ್ಪ ಜಾಗ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಹೇಳಿದೆ.

ತೆರಿಗೆಗಳ ಪಾರದರ್ಶಕತೆ, ಇಕ್ವಿಟಿ ಮತ್ತು ನಿಷ್ಪಕ್ಷಪಾತ ಆಡಳಿತಕ್ಕೆ ನೇರ ತೆರಿಗೆಗಳ ಕೋಡ್ ಅನ್ನು ಜಾರಿಗೊಳಿಸುವ ಭರವಸೆ ನೀಡಿದ್ದು, ಸಂಬಳದ ವರ್ಗದ ಪ್ರಯೋಜನಕ್ಕಾಗಿ ತನ್ನ ಅವಧಿಯುದ್ದಕ್ಕೂ ಸ್ಥಿರವಾದ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಾಯ್ದುಕೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ
ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯ ಪತ್ರ' ಬಿಡುಗಡೆ!: ಉದ್ಯೋಗ ಸೃಷ್ಟಿ, ಜಾತಿ ಗಣತಿ, ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿ ಹಲವು ಭರವಸೆ!

“ಕಳೆದ 10 ವರ್ಷಗಳ ಬಿಜೆಪಿ/ಎನ್‌ಡಿಎ ಸರ್ಕಾರವು ತೆರಿಗೆಯ ಮೊರೆ ಹೋಗಿದೆ. ಪರೋಕ್ಷ ತೆರಿಗೆಗಳ ಮೂಲಕ ಸಾಮಾನ್ಯ ವ್ಯಕ್ತಿ ಮತ್ತು ಬಡವರು ಪಾವತಿಸುವ ತೆರಿಗೆಗಳ ಪಾಲು ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ ಕಾರ್ಪೊರೇಟ್ ಕಂಪನಿಗಳು ಪಾವತಿಸುವ ತೆರಿಗೆಗಳ ಪಾಲು ಕಡಿಮೆಯಾಗಿದೆ - ಇದು ಜನಸ್ನೇಹಿ ಮತ್ತು ಪ್ರಗತಿಪರ ತೆರಿಗೆ ನೀತಿ ಹೇಗಿರಬೇಕು ಎಂಬುದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಟೀಕಿಸಿದೆ.

ಬಡವರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಜಾರಿಗೊಳಿಸಿದ ಜಿಎಸ್‌ಟಿ ಕಾನೂನುಗಳನ್ನು ಜಿಎಸ್‌ಟಿ 2.0 ನೊಂದಿಗೆ ಬದಲಾಯಿಸುವುದಾಗಿ ಕಾಂಗ್ರೆಸ್ ಹೇಳಿದೆ. ಯೂನಿಯನ್ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಒಟ್ಟು ತೆರಿಗೆ ಆದಾಯದ 5% ಗೆ ಸೀಮಿತಗೊಳಿಸುವ ಕಾನೂನನ್ನು ಪರಿಚಯಿಸುವ ಮೂಲಕ ರಾಜ್ಯಗಳಿಗೆ ತೆರಿಗೆ ಆದಾಯದ ಹಕ್ಕಿನ ಪಾಲನ್ನು ನಿರಾಕರಿಸುವ ಮೋದಿ ಸರ್ಕಾರದ "ದ್ವಂದ್ವ "ಸೆಸ್" ನಮ್ಮ ಸರ್ಕಾರ ಕೊನೆಗೊಳಿಸುತ್ತದೆ. ಕೃಷಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದಿಲ್ಲ ಮತ್ತು ಜಿಎಸ್‌ಟಿ ಕೌನ್ಸಿಲ್ ಅನ್ನು ಮರು ವಿನ್ಯಾಸಗೊಳಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com