ಶಿಮ್ಲಾ: ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸೋತ ವಾರಗಳ ನಂತರ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಶನಿವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಚುನಾವಣೆಯಲ್ಲಿ ಟೈ ಆದ ನಂತರ ಚುನಾವಣಾಧಿಕಾರಿಯ ಡ್ರಾ ನಿಯಮಗಳ ವ್ಯಾಖ್ಯಾನವನ್ನು ಪ್ರಶ್ನಿಸಿದ್ದಾರೆ.
ಫೆಬ್ರವರಿ 27 ರಂದು ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದ ನಂತರ ಚುನಾವಣಾಧಿಕಾರಿ ಡ್ರಾ ನಿಯಮ ಮೂಲಕ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರ ಗೆಲುವನ್ನು ಘೋಷಿಸಿದ್ದರು.
ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘ್ವಿ, ಡ್ರಾ ಮೂಲಕ ಸೋತವರನ್ನು ಚುನಾವಣೆಯಲ್ಲಿ ಸೋತರು ಎಂದು ಹೇಳುವುದಕ್ಕೆ "ಕಾನೂನಲ್ಲಾಗಲೀ, ಕಾಯಿದೆಯಲ್ಲಾಗಲೀ ಅಥವಾ ನಿಯಮಗಳಲ್ಲಾಗಲೀ ಇಲ್ಲ ಎಂದು ಹೇಳಿದರು.
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸದಸ್ಯರ ಬಲ ಮತ್ತು ಮೂವರು ಪಕ್ಷೇತರರ ಬೆಂಬಲವನ್ನು ಹೊಂದಿದ್ದರೂ, ಆರು ಕಾಂಗ್ರೆಸ್ ಬಂಡಾಯ ಶಾಸಕರು ಹಾಗೂ ಮೂವರು ಪಕ್ಷೇತರರು, ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಪರವಾಗಿ ಮತ ಚಲಾಯಿಸಿದ್ದರಿಂದ ಇಬ್ಬರೂ ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದಿದ್ದರು. ಹೀಗಾಗಿ ವಿಜೇತರನ್ನು ಡ್ರಾ ಮೂಲಕ ಘೋಷಿಸಲಾಗಿತ್ತು.
Advertisement