ಮುಖ್ತಾರ್ ಅನ್ಸಾರಿ ಕುಟುಂಬ ಭೇಟಿ ಮಾಡಿದ ಅಖಿಲೇಶ್; ಗ್ಯಾಂಗ್‏ಸ್ಟರ್-ರಾಜಕಾರಣಿ ಸಾವಿನ ಬಗ್ಗೆ ಶಂಕೆ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾನುವಾರ ಗ್ಯಾಂಗ್‏ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಗಾಜಿಪುರದ ಮನೆಗೆ ತೆರಳಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.
ಮುಖ್ತಾರ್ ಅನ್ಸಾರಿ ಕುಟುಂಬ ಭೇಟಿ ಮಾಡಿದ ಅಖಿಲೇಶ್ ಯಾದವ್
ಮುಖ್ತಾರ್ ಅನ್ಸಾರಿ ಕುಟುಂಬ ಭೇಟಿ ಮಾಡಿದ ಅಖಿಲೇಶ್ ಯಾದವ್

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾನುವಾರ ಗ್ಯಾಂಗ್‏ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಗಾಜಿಪುರದ ಮನೆಗೆ ತೆರಳಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅನ್ಸಾರಿ ಸಾವಿನ ಸತ್ಯ ಹೊರಬರುತ್ತದೆ ಮತ್ತು ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.

ಮುಕ್ತಾರ್ ಅನ್ಸಾರಿ ಅವರೇ ತಮಗೆ ವಿಷ(ಜೈಲಿನಲ್ಲಿ) ನೀಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವುದು ಆಘಾತಕಾರಿಯಾಗಿದೆ... ಸರ್ಕಾರ ಸತ್ಯವನ್ನು (ಸಾವಿನ) ನಮ್ಮ ಮುಂದೆ ತರುತ್ತದೆ ಮತ್ತು ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅನ್ಸಾರಿ ಕುಟುಂಬ ಭೇಟಿ ಮಾಡಿದ ನಂತರ ಅಖಿಲೇಶ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಐದು ಬಾರಿ ಶಾಸಕರಾಗಿದ್ದ ಅನ್ಸಾರಿ ಅವರು ಮಾರ್ಚ್ 28 ರಂದು ಹೃದಯ ಸ್ತಂಭನದಿಂದ ನಿಧನರಾದರು ಎಂದು ಸರ್ಕಾರ ಹೇಳಿದೆ. ಆದರೆ, ಜೈಲಿನೊಳಗೆ ಅವರಿಗೆ ವಿಷ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಖ್ತಾರ್ ಅನ್ಸಾರಿ ಕುಟುಂಬ ಭೇಟಿ ಮಾಡಿದ ಅಖಿಲೇಶ್ ಯಾದವ್
ಯುಪಿ: ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಸಾವು 'ಯೋಜಿತ ಕೊಲೆ' ಕುಟುಂಬಸ್ಥರ ಆರೋಪ

ಕುಟುಂಬಕ್ಕೆ ಸಾಂತ್ವನ ಹೇಳಿದ ಯಾದವ್, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತನಿಖಾ ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗಿದೆ.

"ನ್ಯಾಯಕ್ಕಾಗಿ ಮುಖ್ಯಮಂತ್ರಿಗಳ ನಿವಾಸ, ಕಚೇರಿ ಮುಂದೆ ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ಉತ್ತರ ಪ್ರದೇಶದಲ್ಲಿ ನೋಡಿದ್ದೇವೆ. ಜೈಲುಗಳ ಒಳಗೆ ಸಾವುಗಳು ಸಂಭವಿಸುತ್ತಿವೆ. ಕಸ್ಟಡಿ ಸಾವುಗಳಲ್ಲಿ ಯುಪಿ ಮುಂದಿದೆ" ಎಂದು ಮಾಜಿ ಸಿಎಂ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com