ಜಬಲ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಬಲ್‌ಪುರದಲ್ಲಿ ಬೃಹತ್ ರೋಡ್‌ಶೋ ನಡೆಸುವ ಮೂಲಕ ಮಧ್ಯಪ್ರದೇಶದಲ್ಲಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ರಾಜ್ಯ PWD ಸಚಿವ ರಾಕೇಶ್ ಸಿಂಗ್ ಮತ್ತು ಪಕ್ಷದ ಜಬಲ್ಪುರ ಲೋಕಸಭಾ ಅಭ್ಯರ್ಥಿ ಆಶಿಶ್ ದುಬೆ ಅವರು ಪ್ರಧಾನಿ ಮೋದಿ ಜತೆಗೆ ಇದ್ದರು.
ರೋಡ್‌ಶೋ ಶಹೀದ್ ಭಗತ್ ಸಿಂಗ್ ಕ್ರಾಸಿಂಗ್‌ನಿಂದ ಸಂಜೆ 6:30 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ರಾತ್ರಿ 7:15 ಕ್ಕೆ ಇಲ್ಲಿನ ಗೋರಖ್‌ಪುರ ಪ್ರದೇಶದ ಆದಿ ಶಂಕರಾಚಾರ್ಯ ಕ್ರಾಸಿಂಗ್‌ನಲ್ಲಿ ಮುಕ್ತಾಯವಾಯಿತು.
ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಮಧ್ಯ ಪ್ರದೇಶಕ್ಕೆ ಮೊದಲ ಬಾರಿ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಸಿಎಂ ಮೋಹನ್ ಯಾದವ್ ಮತ್ತು ಇತರ ಬಿಜೆಪಿ ನಾಯಕರು ಪ್ರಧಾನಿ ಮೋದಿಗೆ ಸಾಥ್ ನೀಡಿದರು.
ಬಿಸಿಲಿನ ತಾಪದ ನಡುವೆಯೂ ಮಧ್ಯಾಹ್ನ 3 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಾರ್ಗದ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು ಮತ್ತು ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಾ ಮತ್ತು ವೀಡಿಯೊಗಳನ್ನು ಶೂಟ್ ಮಾಡುತ್ತಿದ್ದರು.
ಅವರಲ್ಲಿ ಹಲವರು 'ಮೇರಾ ಘರ್ ಮೋದಿ ಕಾ ಘರ್' ಮತ್ತು 'ಮೇರಾ ಪರಿವಾರ್ ಮೋದಿ ಕಾ ಪರಿವಾರ್' ಎಂಬ ಫಲಕಗಳನ್ನು ಹಿಡಿದಿದ್ದರು.
Advertisement