
ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿದ್ದ ಕಾರ್ಯಕ್ರಮದಲ್ಲಿನ ಬ್ಯಾನರ್ ನಲ್ಲಿ ಬಿಜೆಪಿ ಸಂಸದ ಫಗ್ಗನ್ ಸಿಂಗ್ ಕುಲಸ್ತೆ ಫೋಟೊ ಇದ್ದದ್ದು ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರ ಉಂಟು ಮಾಡಿದೆ.
ಮಾಂಡ್ಲಾ ಲೋಕಸಭಾ ಕ್ಷೇತ್ರದಲ್ಲಿ ಈ ಘಟನೆ ವರದಿಯಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ಮಾನವ ದೋಷ ಎಂದು ಹೇಳಿದ್ದರೆ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ವಿಪಕ್ಷ ಕಾಂಗ್ರೆಸ್ ಚುನಾವಣೆಗೂ ಮುನ್ನ ಸೋಲೊಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಂಡ್ಲಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಿಯೋನಿ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಮೀ ದೂರದಲ್ಲಿರುವ ಧನೋರಾದಲ್ಲಿ ಕಾಂಗ್ರೆಸ್ ಕಾರ್ಯಕ್ರಮದ ನಂತರದ ದಿನದಲ್ಲಿ ಮತ್ತೊಂದು ಕಾರ್ಯಕ್ರಮ ನಿಗದಿಯಾಗಿತ್ತು. ಆ ರ್ಯಾಲಿಯಲ್ಲಿ ವೇದಿಕೆಯ ಹಿನ್ನೆಲೆಯಾಗಿ ಕಾರ್ಯನಿರ್ವಹಿಸುವ ಬ್ಯಾನರ್‌ನಲ್ಲಿ ಕುಲಾಸ್ತೆ ಚಿತ್ರವನ್ನು ತೋರಿಸಲಾಗಿದೆ.
ವೀಡಿಯೊದಲ್ಲಿ, ಕಿಯೋಲಾರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಜನೀಶ್ ಹರ್ವಂಶ್ ಸಿಂಗ್ ಅವರ ಚಿತ್ರದೊಂದಿಗೆ ಸ್ಥಳೀಯ ಬಿಜೆಪಿ ಸಂಸದರೂ ಆಗಿರುವ ಕೇಂದ್ರ ಸಚಿವರ ಚಿತ್ರವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಚ್ಚುತ್ತಿರುವುದು ಕಂಡುಬಂದಿದೆ.
ಇದು ಕಾಂಗ್ರೆಸ್‌ನ ಗಾಂಭೀರ್ಯವನ್ನು ತೋರಿಸುತ್ತದೆ, ಅವರು ತಮ್ಮ ಬದಲಿಗೆ ಬಿಜೆಪಿ ಅಭ್ಯರ್ಥಿಯ ಚಿತ್ರವನ್ನು ಹಾಕಿದ್ದಾರೆ, ಅವರು ಚುನಾವಣೆಗೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ," ಎಂದು ಸಿಎಂ ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ, ಬ್ಯಾನರ್ ಪ್ರಮಾದ "ಮಾನವ ದೋಷ" ಎಂದು ಹೇಳಿದ್ದಾರೆ. ಮಾನವೀಯ ದೋಷವಿದ್ದರೂ ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುವುದನ್ನು ಬಿಜೆಪಿ ರೂಢಿ ಮಾಡಿಕೊಂಡಿದೆ.ಬಿಜೆಪಿಯವರ ಇಂತಹ ಅಭ್ಯಾಸಗಳ ಬಗ್ಗೆ ನಾವೇನೂ ಹೇಳಲಾರೆ ಎಂದಿದ್ದಾರೆ.
Advertisement