ಮೊದಲ ಬಾರಿಗೆ ರಸ್ತೆಗಳಲ್ಲಿ ಈದ್ ನಮಾಜ್ ನಡೆದಿಲ್ಲ, ಇದು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆ: ದೆಹಲಿ ಲೆಫ್ಟಿನೆಂಟ್ ಗವರ್ನರ್

ಈ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಈದ್ ಆಚರಣೆ ವೇಳೆ ರಸ್ತೆಗಳಲ್ಲಿ ನಮಾಜ್ ನಡೆದಿಲ್ಲ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಹೇಳಿದ್ದಾರೆ.
ಈದ್
ಈದ್ online desk

ಇದೇ ಮೊದಲ ಬಾರಿಗೆ ರಸ್ತೆಯಲ್ಲಿ ಎಲ್ಲಿಯೂ ನಮಾಜ್ ನಡೆಯದೇ ಕೇವಲ ಮಸೀದಿಗಳಲ್ಲಷ್ಟೇ ನಮಾಜ್ ನಡೆಸಲಾಗಿದೆ. ಇದು ಸೌಹಾರ್ದತೆ, ಸಹಬಾಳ್ವೆಗೆ ಅತ್ಯುತ್ತಮವಾದ ಉದಾಹರಣೆಯಾಗಿದೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ.

ಸಕ್ಸೇನಾ ಗುರುವಾರ ಈದ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದರು ಮತ್ತು ಪರಸ್ಪರ ಚರ್ಚೆಗಳು ಮತ್ತು ಸೌಹಾರ್ದತೆಯಿಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಕ್ಸೇನಾ, ದೆಹಲಿಯ ಯಾವುದೇ ರಸ್ತೆಗಳಲ್ಲಿ ನಮಾಜ್ ನಡೆಸಲಾಗಿಲ್ಲ, ಯಾವುದೇ ಅಹಿತಕರ ಘಟನೆಗಳೂ ನಡೆದಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.

"ಈದ್-ಉಲ್-ಫಿತರ್ ಶುಭಾಶಯಗಳನ್ನು ಪುನರುಚ್ಚರಿಸುತ್ತಾ, ದೆಹಲಿಯ ಎಲ್ಲಾ ಮಸೀದಿಗಳು ಮತ್ತು ಈದ್ಗಾಗಳ ಇಮಾಮ್‌ಗಳು ಮತ್ತು ಮಸೀದಿ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ನಮ್ಮ ಎಲ್ಲಾ ಮುಸ್ಲಿಂ ಸಹೋದರರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ" ಎಂದು ಸಕ್ಸೇನಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

ಇಮಾಮ್‌ಗಳು ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಮಸೀದಿ ಆವರಣದೊಳಗೆ ಆಯೋಜಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ "ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡರು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com