ರಾಹುಲ್ ಗಾಂಧಿ ಮೈಸೂರ್ ಪಾಕ್ ಗಿಫ್ಟ್: ಜೂನ್ 4ರಂದು 'ಇಂಡಿಯಾ' ಒಕ್ಕೂಟ ಸಿಹಿ ಗೆಲುವು ನೀಡಲಿದೆ ಎಂದ ಎಂ.ಕೆ. ಸ್ಟಾಲಿನ್

ಜೂನ್ 4 ರಂದು ಇಂಡಿಯಾ ಮೈತ್ರಿಕೂಟ 'ಸಿಹಿ ಗೆಲುವು' ನೀಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.
ಮೈಸೂರು ಪಾಕ್ ಗಿಫ್ಟ್ ನ್ನು ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೆ ನೀಡಿದ ರಾಹುಲ್ ಗಾಂಧಿ
ಮೈಸೂರು ಪಾಕ್ ಗಿಫ್ಟ್ ನ್ನು ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೆ ನೀಡಿದ ರಾಹುಲ್ ಗಾಂಧಿ

ಚೆನ್ನೈ: ಜೂನ್ 4 ರಂದು ಇಂಡಿಯಾ ಮೈತ್ರಿಕೂಟ 'ಸಿಹಿ ಗೆಲುವು' ನೀಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.

ನಿನ್ನೆ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಮೈಸೂರು ಪಾಕ್ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನನ್ನ ಸೋದರನ ಪ್ರೀತಿಯ ಆದರ ಕಂಡು ನಾನು ಬಹಳ ಸಂತೋಷಭರಿತನಾಗಿದ್ದೇನೆ ಎಂದರು.

ನಿನ್ನೆ ರಾಹುಲ್ ಗಾಂಧಿ ಮತ್ತು ಎಂ ಕೆ ಸ್ಟಾಲಿನ್ ಅವರು ಕೊಯಮತ್ತೂರಿನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.

ರಾಹುಲ್ ಗಾಂಧೀಜಿ ಅವರು ಮೈಸೂರು ಪಾಕ್ ಖರೀದಿಸಲು ಕೊಯಮತ್ತೂರಿನ ಬೇಕರಿಯೊಂದಕ್ಕೆ ರಸ್ತೆ ವಿಭಜಕವನ್ನು ದಾಟಿ ಹೋಗುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಅವರು, ನನ್ನ ಸೋದರನ ಸಿಹಿಯಾದ ಆದರಕ್ಕೆ ನಾನು ಬಹಳ ಖುಷಿಯಾಗಿದ್ದೇನೆ. ಜೂನ್ 4 ರಂದು, ಇಂಡಿಯಾ ಒಕ್ಕೂಟವು ಖಂಡಿತವಾಗಿಯೂ ಸಿಹಿ ಸುದ್ದಿಯನ್ನು ನೀಡುತ್ತದೆ! ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ರಸ್ತೆ ವಿಭಜಕವನ್ನು ಜಿಗಿದು, ರಸ್ತೆ ದಾಟಿ ಬೇಕರಿಯೊಂದರೊಳಗೆ ಹೋಗುತ್ತಾರೆ.

ನೀವು ಏನು ಖರೀದಿಸಲು ಬಯಸುತ್ತೀರಿ ಎಂದು ಅಂಗಡಿಯವರು ಕೇಳಿದಾಗ ರಾಹುಲ್ ಗಾಂಧಿ "ನನ್ನ ಸಹೋದರ ಸ್ಟಾಲಿನ್‌ಗೆ ಮೈಸೂರು ಪಾಕ್ ಬೇಕು" ಎಂದು ಹೇಳುವುದನ್ನು ಕೇಳಬಹುದು.

ತನಗೆ ನೀಡಿದ ಸ್ಯಾಂಪಲ್ ಮೈಸೂರು ಪಾಕ್ ಸವಿದ ನಂತರ, ರಾಹುಲ್ ಗಾಂಧಿ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೆ ಗಿಫ್ಟ್ ಆಗಿ ನೀಡಲೆಂದು ಅಲ್ಲಿಂದ ಪ್ಯಾಕ್ ಮಾಡಿಸಿ ತೆಗೆದುಕೊಂಡು ಅದಕ್ಕೆ ಹಣ ಪಾವತಿ ಮಾಡುತ್ತಾರೆ. ನಂತರ ಮಾರಾಟಗಾರನಿಗೆ ಧನ್ಯವಾದ ಹೇಳಿ ಅಲ್ಲಿನ ಸಿಬ್ಬಂದಿಯೊಂದಿಗೆ ಫೋಟೋ ತೆಗೆಸಿಕೊಂಡು ಹೊರಬರುತ್ತಾರೆ.

ನಂತರ ಅವರು ಸ್ಟಾಲಿನ್ ಬಳಿಗೆ ಬಂದ ನಂತರ ಸಿಹಿ ತಿಂಡಿಯ ಉಡುಗೊರೆಯನ್ನು ನೀಡುತ್ತಾರೆ. ಸ್ಟಾಲಿನ್ ಅವರು ಸಂತೋಷದಿಂದ ಮುಖ ಅರಳಿಸಿ ಅದನ್ನು ಸ್ವೀಕರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com