ನನ್ನ ಪಕ್ಷ ನಿಮ್ಮ ಪದವಿಯಂತೆ 'ನಕಲಿ' ಅಲ್ಲ: ಪ್ರಧಾನಿ ಮೋದಿಗೆ ಉದ್ಧವ್ ಠಾಕ್ರೆ ತಿರುಗೇಟು

ನನ್ನ ಪಕ್ಷ ನಿಮ್ಮ ಪದವಿಯಂತೆ 'ನಕಲಿ' ಅಲ್ಲ ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಪ್ರಧಾನಿ ನರೇಂದ್ರ ಮೋದಿಯವರ "ನಕಲಿ ಶಿವಸೇನೆ" ಹೇಳಿಕೆಗೆ ಶನಿವಾರ ತಿರುಗೇಟು ನೀಡಿದ್ದಾರೆ.
ಉದ್ಧವ್ ಠಾಕ್ರೆ - ಪ್ರಧಾನಿ ನರೇಂದ್ರ ಮೋದಿ
ಉದ್ಧವ್ ಠಾಕ್ರೆ - ಪ್ರಧಾನಿ ನರೇಂದ್ರ ಮೋದಿ

ಪಾಲ್ಘರ್: ನನ್ನ ಪಕ್ಷ ನಿಮ್ಮ ಪದವಿಯಂತೆ 'ನಕಲಿ' ಅಲ್ಲ ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಪ್ರಧಾನಿ ನರೇಂದ್ರ ಮೋದಿಯವರ "ನಕಲಿ ಶಿವಸೇನೆ" ಹೇಳಿಕೆಗೆ ಶನಿವಾರ ತಿರುಗೇಟು ನೀಡಿದ್ದಾರೆ.

ತಮ್ಮ ಪಕ್ಷದ ಪಾಲ್ಘರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಭಾರತಿ ಕಾಮ್ಡಿ ಪರ ಮುಂಬೈ ಬಳಿಯ ಬೋಯ್ಸರ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಠಾಕ್ರೆ, ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ 300 ಸ್ಥಾನಗಳನ್ನು ದಾಟಿ ಬಿಜೆಪಿಯನ್ನು ಸೋಲಿಸುತ್ತದೆ ಎಂದು ಹೇಳಿದ್ದಾರೆ.

ಪಾಲ್ಘರ್ ಜಿಲ್ಲೆಯ ವಧವನ್ ಬಂದರು ಯೋಜನೆಯನ್ನು ರದ್ದುಗೊಳಿಸುವುದಾಗಿ ಪ್ರತಿಜ್ಞೆ ಮಾಡಿ ಮಾಜಿ ಸಿಎಂ, ಇದನ್ನು ಸ್ಥಳೀಯ ಮೀನುಗಾರರು ತೀವ್ರವಾಗಿ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಉದ್ಧವ್ ಠಾಕ್ರೆ - ಪ್ರಧಾನಿ ನರೇಂದ್ರ ಮೋದಿ
ಲೋಕಸಭೆ ಚುನಾವಣೆ: ಶಿವಸೇನೆ(UBT) 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಅನಂತ್ ಗೀತೆ, ಸಾವಂತ್‌ಗೆ ಟಿಕೆಟ್

ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಉತ್ತಮ ಯೋಜನೆಗಳನ್ನು ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಪರಿಸರ ವಿನಾಶಕಾರಿ ಯೋಜನೆಗಳನ್ನು ಜಾರಿಗೆತರಲಾಗುತ್ತಿದೆ ಎಂದು ಆರೋಪಿಸಿದರು.

ಪಾಲ್ಘರ್‌ನಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಉದ್ಧವ್ ಠಾಕ್ರೆ ಭರವಸೆ ನೀಡಿದರು.

"ಮಣ್ಣಿನ ಮಕ್ಕಳ ಹಕ್ಕುಗಳಿಗಾಗಿ ಹೋರಾಡಲು ಶಿವಸೇನಾ ಪ್ರಮುಖ್(ಬಾಳ ಠಾಕ್ರೆ) ಸ್ಥಾಪಿಸಿದ ಶಿವಸೇನೆಯನ್ನು ನಕಲಿ ಎಂದು ಕರೆಯಲಾಗುತ್ತಿದೆ. ಅದನ್ನು ನಕಲಿ ಎಂದು ಕರೆಯಲು 'ನಿಮ್ಮ ಪದವಿ ಅಲ್ಲ" ಎಂದು ಠಾಕ್ರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಾರದ ಆರಂಭದಲ್ಲಿ, ಮಹಾರಾಷ್ಟ್ರದ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ಠಾಕ್ರೆ ನೇತೃತ್ವದ ಶಿವಸೇನೆ ನಕಲಿ ಎಂದು ಕರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com