ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು: ಹವಾಮಾನ ಇಲಾಖೆ

ಪ್ರಸಕ್ತ ಸಾಲಿನಲ್ಲಿ ಮುಂಗಾರು ವಾಡಿಕೆಗಿಂತಲೂ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆ (ಸಾಂಕೇತಿಕ ಚಿತ್ರ)
ಮಳೆ (ಸಾಂಕೇತಿಕ ಚಿತ್ರ)online desk

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ವಾಡಿಕೆಗಿಂತಲೂ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಲಾ ನಿನಾ ಪರಿಸ್ಥಿತಿಗಳು ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಸ್ಥಿರವಾಗಲಿದ್ದು, ವಾಡಿಕೆಗಿಂತಲೂ ಹೆಚ್ಚಿನ ಮುಂಗಾರಿಗೆ ಅವಕಾಶ ಮಾಡಿಕೊಡಲಿದೆ ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ.

ಆದಾಗ್ಯೂ, ದೇಶಾದ್ಯಂತ ಒಂದೇ ರೀತಿಯಲ್ಲಿ ಹೆಚ್ಚಿನ ಮುಂಗಾರಿನ ಬಗ್ಗೆ ಯಾವುದೇ ಭರವಸೆ ಇಲ್ಲ. ಹವಾಮಾನ ಬದಲಾವಣೆಯಿಂದಾಗಿ ಮಳೆಯಾಗುವ ಸಂಭವಗಳು ವ್ಯತ್ಯಯವಾಗಲಿದೆ.

ಹವಾಮಾನ ವಿಜ್ಞಾನಿಗಳ ಪ್ರಕಾರ, ಮಳೆಯ ದಿನಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ದಿನಗಳು ಕಡಿಮೆ ಸಂಖ್ಯೆಯಲ್ಲಿದ್ದು, ಭಾರಿ ಪ್ರಮಾಣದ ಮಳೆಗಳು ಸಂಭವಿಸುವ ಪರಿಸ್ಥಿತಿಗಳು ಹೆಚ್ಚುತ್ತಿವೆ ಇದು ಮುಂದಿನ ಹಂತದಲ್ಲಿ ಪದೇ ಪದೇ ಎದುರಾಗುವ ಬರಗಾಲ ಹಾಗೂ ಪ್ರವಾಹಗಳಿಗೆ ಕಾರಣವಾಗಲಿದೆ.

ಮಳೆ (ಸಾಂಕೇತಿಕ ಚಿತ್ರ)
ಹುಸಿಯಾದ ನಿರೀಕ್ಷೆ, ಕರುಣೆ ತೋರದ ವರುಣ: ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ರಣ ಬಿಸಿಲು; IMD ಭವಿಷ್ಯ

1951-2023 ವರೆಗಿನ ಅಂಕಿ-ಅಂಶಗಳ ಪ್ರಕಾರ, ಎಲ್ ನಿನೋ ನಂತರದ ಲಾ ನಿನಾ ಪರಿಸ್ಥಿತಿಯಲ್ಲಿ ಭಾರತ ಮುಂಗಾರು ಋತುವಿನಲ್ಲಿ 9 ಸಂದರ್ಭಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

4 ತಿಂಗಳ ಮುಂಗಾರು ಋತುವಿನಲ್ಲಿ (ಜೂನ್ ನಿಂದ ಸೆಪ್ಟೆಂಬರ್) ಭಾರತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಾಣುವ ಸಾಧ್ಯತೆಯಿದೆ, ಜೊತೆಗೆ ದೀರ್ಘಾವಧಿಯ ಸರಾಸರಿ (87 ಸೆಂ.ಮೀ) 106 ಪ್ರತಿಶತದಷ್ಟು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com