ಇಂಧನ ಖಾಲಿಯಾಗುವ ಒಂದೆರಡು ನಿಮಿಷ ಮುಂಚೆ ವಿಮಾನ ಲ್ಯಾಂಡಿಂಗ್! ದೆಹಲಿ ಪೊಲೀಸ್ ಅಧಿಕಾರಿ ಆರೋಪ; ಇಂಡಿಗೋ ಹೇಳಿದ್ದು ಹೀಗೆ..

ಅಯೋಧ್ಯೆಯಿಂದ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಇಂಧನ ಇನ್ನು ಕೇವಲ 1 ಅಥವಾ 2 ನಿಮಿಷದಲ್ಲಿ ಖಾಲಿಯಾಗಲಿದೆ ಅನ್ನುವಷ್ಟರಲ್ಲಿ ವಿಮಾನ ಲ್ಯಾಂಡ್ ಆಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿಮಾನದಲ್ಲಿ ಸಾಕಷ್ಟು ಇಂಧನ ಇತ್ತು ಎಂದು ಇಂಡಿಗೋ ವಿಮಾನ ತಿಳಿಸಿದೆ.
ಇಂಡಿಗೋ ಸಾಂದರ್ಭಿಕ ಚಿತ್ರ
ಇಂಡಿಗೋ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅಯೋಧ್ಯೆಯಿಂದ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಶನಿವಾರ ಪ್ರತಿಕೂಲ ಹವಾಮಾನದ ಕಾರಣ ಚಂಡೀಗಢಕ್ಕೆ ತಿರುಗಿಸಲಾಗಿದೆ. ಆದರೆ, ಇಂಧನ ಇನ್ನು ಕೇವಲ 1 ಅಥವಾ 2 ನಿಮಿಷದಲ್ಲಿ ಖಾಲಿಯಾಗಲಿದೆ ಅನ್ನುವಷ್ಟರಲ್ಲಿ ವಿಮಾನ ಲ್ಯಾಂಡ್ ಆಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿಮಾನದಲ್ಲಿ ಸಾಕಷ್ಟು ಇಂಧನ ಇತ್ತು ಎಂದು ಇಂಡಿಗೋ ವಿಮಾನ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿಯ ಅಪರಾಧ ವಿಭಾಗದ ಡಿಸಿಪಿ ಸತೀಶ್ ಕುಮಾರ್. ಅಯೋಧ್ಯೆಯಿಂದ ದೆಹಲಿಗೆ ಹೊರಟಿದ್ದ ಇಂಡಿಗೋ 6E 2702 ವಿಮಾನದಲ್ಲಿ ಕೆಟ್ಟ ಅನುಭವವಾಗಿದೆ

ವಿಮಾನದ ನಿಗದಿತ ನಿರ್ಗಮನ ಸಮಯ ಮಧ್ಯಾಹ್ನ 3.25 ಮತ್ತು ನಿಗದಿತ ಆಗಮನದ ಸಮಯ ಸಂಜೆ 4.30 ಆದರೆ ಸಂಜೆ 4.15 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಟ್ಟ ವಾತಾವರಣದಿಂದಾಗಿ ಲ್ಯಾಂಡಿಂಗ್ ಆಗದೆ ಸಂಜೆ 5-30ಕ್ಕೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವುದಾಗಿ ಪೈಲಟ್ ಘೋಷಿಸಿದರು.

45 ನಿಮಿಷಗಳಿಗೆ ಆಗುವಷ್ಟು ಇಂಧನ ಇದೆ ಎಂದು ಹೇಳಿದ ಬಳಿಕ ವಿಮಾನ 115 ನಿಮಿಷಗಳು ತಡವಾಗಿ ಚಂಡೀಗಢ ​ವಿಮಾನ ನಿಲ್ದಾಣದಲ್ಲಿ ಇಳಿಯಿತು. ಸುರಕ್ಷಿತವಾಗಿ ವಿಮಾನ ಲ್ಯಾಂಡ್​ ಆಯಿತು. ಆದರೆ ಇನ್ನೇನು 2 ನಿಮಿಷಕ್ಕೆ ಆಗುವಷ್ಟು ಇಂಧನ ಇದ್ದಾಗ ವಿಮಾನ ಲ್ಯಾಂಡ್​ ಆಗಿದೆ. ಕೆಲವೇ ನಿಮಿಷಗಳು ತಡವಾಗಿದ್ದರೂ ಎಲ್ಲರ ಪ್ರಾಣ ಅಪಾಯದಲ್ಲಿತ್ತು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಮಾನ ಲ್ಯಾಂಡಿಂಗ್​ ತಡವಾದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಫೋಸ್ಟ್ ನ್ನು ನಾಗರಿಕ ವಿಮಾನಯಾನ ಸಚಿವಾಲಯ, ದೆಹಲಿ ವಿಮಾನ ನಿಲ್ದಾಣ, ಇಂಡಿಗೋ ವಿಮಾನಯಾನ ಕಂಪನಿಗೆ ಟ್ಯಾಗ್ ಮಾಡಿದ್ದು, ಇಂಡಿಗೋದಲ್ಲಿ, "ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತೇ ಎಂಬುದರ ಕುರಿತು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಸೋಮವಾರ ಪ್ರತಿಕ್ರಿಯಿಸಿರುವ ಇಂಡಿಗೋ ಕಂಪನಿ, ದೆಹಲಿಯಲ್ಲಿನ ಕೆಟ್ಟ ಹವಾಮಾನದಿಂದಾಗಿ ವಿಮಾನವನ್ನು ಚಂಡೀಗಢಕ್ಕೆ ತಿರುಗಿಸಲಾಗಿದೆ ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂದು ತಿಳಿಸಿದೆ.

"ಇದು ಸಂಪೂರ್ಣವಾಗಿ ಸುರಕ್ಷಿತ ತಂತ್ರವಾಗಿದೆ. ನಿಯಮಗಳ ಪ್ರಕಾರವೇ ವಿಮಾನವನ್ನು ಚಂಡೀಘಡಕ್ಕೆ ತಿರುಗಿಸಲಾಗಿದೆ. ಈ ಎಲ್ಲಾ ಸಮಯದಲ್ಲೂ ಸಾಕಷ್ಟು ಇಂಧನವನ್ನು ಹೊಂದಿತ್ತು ಎಂದು ಏರ್‌ಲೈನ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com