ನವದೆಹಲಿ: ನಾರ್ತ್ ಬ್ಲಾಕ್‌ನಲ್ಲಿ ಸಣ್ಣ ಪ್ರಮಾಣದ ಅಗ್ನಿ ಅವಘಡ, ಯಾವುದೇ ಕಡತಕ್ಕೆ ಹಾನಿಯಾಗಿಲ್ಲ- MHA

ರಾಷ್ಟ್ರ ರಾಜಧಾನಿಯಲ್ಲಿರುವ ಹೆಚ್ಚಿನ ಭದ್ರತೆಯಿರುವ ಪ್ರದೇಶಗಳಲ್ಲಿ ಒಂದಾಗಿರುವ ರೈಸಿನಾ ಹಿಲ್ಸ್‌ನಲ್ಲಿರುವ ಗೃಹ ವ್ಯವಹಾರಗಳು ಮತ್ತು ಸಿಬ್ಬಂದಿ ಸಚಿವಾಲಯಗಳನ್ನು ಹೊಂದಿರುವ ನಾರ್ತ್ ಬ್ಲಾಕ್‌ನಲ್ಲಿ ಮಂಗಳವಾರ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಯಾರೂ ಗಾಯಗೊಂಡಿಲ್ಲ, ಯಾವುದೇ ಕಡತಕ್ಕೂ ಹಾನಿಯಾಗಿಲ್ಲ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ನಾರ್ತ್ ಬ್ಲಾಕ್ ಸಾಂದರ್ಭಿಕ ಚಿತ್ರ
ನಾರ್ತ್ ಬ್ಲಾಕ್ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಹೆಚ್ಚಿನ ಭದ್ರತೆಯಿರುವ ಪ್ರದೇಶಗಳಲ್ಲಿ ಒಂದಾಗಿರುವ ರೈಸಿನಾ ಹಿಲ್ಸ್‌ನಲ್ಲಿರುವ ಗೃಹ ವ್ಯವಹಾರಗಳು ಮತ್ತು ಸಿಬ್ಬಂದಿ ಸಚಿವಾಲಯಗಳನ್ನು ಹೊಂದಿರುವ ನಾರ್ತ್ ಬ್ಲಾಕ್‌ನಲ್ಲಿ ಮಂಗಳವಾರ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಯಾರೂ ಗಾಯಗೊಂಡಿಲ್ಲ, ಯಾವುದೇ ಕಡತಕ್ಕೂ ಹಾನಿಯಾಗಿಲ್ಲ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಕಟ್ಟಡದ ಎರಡನೇ ಮಹಡಿಯ ವಿದ್ಯುತ್ ಉಪಕರಣಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸಿಐಎಸ್‌ಎಫ್, ಸಿಪಿಡಬ್ಲ್ಯೂಡಿ ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳ ಜಂಟಿ ಕಾರ್ಯಾಚರಣೆಯಿಂದ 20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ.

ಬೆಂಕಿ ಅವಘಡದಿಂದ ಯಾವುದೇ ಗಾಯಗಳು ವರದಿಯಾಗಿಲ್ಲ. ಯಾವುದೇ ಫೈಲ್‌ಗಳು ಹಾನಿಯಾಗಿಲ್ಲ. ಕೆಲವು ಪೀಠೋಪಕರಣ ಮತ್ತಿತರ ವಸ್ತುಗಳು ಭಾಗಶಃ ಹಾನಿಗೊಳಗಾಗಿವೆ" ಎಂದು ವಕ್ತಾರರು ತಿಳಿಸಿದ್ದಾರೆ.

ಜೆರಾಕ್ಸ್ ಯಂತ್ರ, ಕೆಲವು ಕಂಪ್ಯೂಟರ್‌ಗಳು ಮತ್ತು ಕೆಲವು ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com