ಲೋಕಸಭಾ ಚುನಾವಣೆ: ನಾಳೆ ಮೊದಲ ಹಂತದ ಮತದಾನ, ಪ್ರತಿಯೊಂದು ಓಟು ನಿರ್ಣಾಯಕ ಎಂದ CEC!

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುರುವಾರ ಪ್ರತಿಯೊಂದು ಮತದ ಮಹತ್ವವನ್ನು ಜನರಿಗೆ ನೆನಪಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಯೊಂದು ಓಟು ನಿರ್ಣಾಯಕ ಎಂದು ಅವರು ಹೇಳಿದ್ದಾರೆ.
ರಾಜೀವ್ ಕುಮಾರ್
ರಾಜೀವ್ ಕುಮಾರ್
Updated on

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುರುವಾರ ಪ್ರತಿಯೊಂದು ಮತದ ಮಹತ್ವವನ್ನು ಜನರಿಗೆ ನೆನಪಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಯೊಂದು ಓಟು ನಿರ್ಣಾಯಕ ಎಂದು ಅವರು ಹೇಳಿದ್ದಾರೆ.

ಚುನಾವಣೆಗಳು ಭಾರತದ ಪ್ರಜಾಪ್ರಭುತ್ವದ ಅತ್ಯಂತ ಸುಂದರವಾದ ಅಭಿವ್ಯಕ್ತಿಯಾಗಿದೆ. "ಮತದಾನಕ್ಕೆ ಸಮಾನವಾದುದು ಯಾವುದೂ ಇಲ್ಲ" ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಜನರು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಭಾರತೀಯ ಮತದಾರರ ಚೈತನ್ಯವು ಬೇಸಿಗೆಯ ಬಿಸಿಯನ್ನು ಸೋಲಿಸುತ್ತದೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ.

ರಾಜೀವ್ ಕುಮಾರ್
ಪಶ್ಚಿಮ ಬಂಗಾಳ: ಕೂಚ್ ಬೆಹಾರ್‌ಗೆ ಭೇಟಿ ನೀಡುವ ಕುರಿತು ರಾಜ್ಯಪಾಲರಿಗೆ ಚುನಾವಣಾ ಆಯೋಗ ಸಲಹೆ

ನಮ್ಮ ಪ್ರಜಾಪ್ರಭುತ್ವದಲ್ಲಿ, ಚುನಾವಣೆಗಳು ನಿಮಗೆ ಸೇರಿದ್ದು, ಆಯ್ಕೆಯು ನಿಮಗೆ ಸೇರಿದೆ. ನೀವು ಸರ್ಕಾರವನ್ನು ನಿರ್ಧರಿಸುತ್ತೀರಿ. ನಿಮ್ಮ ಸಲುವಾಗಿ, ನಿಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ, ನಿಮ್ಮ ಗ್ರಾಮ ಅಥವಾ ಪಟ್ಟಣಕ್ಕಾಗಿ ಮತ್ತು ಸಹಜವಾಗಿ, ದೇಶಕ್ಕಾಗಿ ಎಂದಿರುವ ಅವರು,"ಚುನಾವಣಾ ಭಾಗವಹಿಸುವಿಕೆಯಲ್ಲಿ ಕ್ರಾಂತಿ ನಡೆಸಲು ಯುವ ಜನಾಂಗಕ್ಕೆ ಕರೆ ನೀಡುತ್ತೇನೆ. ಪ್ರತಿಯೊಂದು ಮತವು ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರದಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿರುವ 102 ಸ್ಥಾನಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಅರುಣಾಚಲ ಪ್ರದೇಶ (60 ಸ್ಥಾನಗಳು) ಮತ್ತು ಸಿಕ್ಕಿಂ (32 ಸ್ಥಾನಗಳು) ವಿಧಾನಸಭೆ ಚುನಾವಣೆಗಳು ಸಹ ಏಕಕಾಲದಲ್ಲಿ ನಡೆಯಲಿವೆ.

ಈ ಹಂತದಲ್ಲಿ 16.63 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಲ್ಲಿ 8.4 ಕೋಟಿ ಪುರುಷರು, 8.23 ​​ಕೋಟಿ ಮಹಿಳೆಯರು ಮತ್ತು 11,371 ತೃತೀಯಲಿಂಗಿಗಳು ಸೇರಿದ್ದಾರೆ. 35.67 ಲಕ್ಷ ಮೊದಲ ಬಾರಿಗೆ ಮತದಾರರಿದ್ದಾರೆ, ಜೊತೆಗೆ 20-29 ವರ್ಷ ವಯಸ್ಸಿನ 3.51 ಕೋಟಿ ಯುವ ಮತದಾರರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com