ಕೇರಳ: ವೃದ್ಧ ಮಹಿಳೆ ಮನೆಯಲ್ಲಿ ಮತದಾನದ ವೇಳೆ ಹಸ್ತಕ್ಷೇಪ: ಅಧಿಕಾರಿಗಳು ಅಮಾನತು

ವೃದ್ಧೆಯೊಬ್ಬರು ಮನೆಯಿಂದ ಮತದಾನ ಮಾಡುತ್ತಿದ್ದ ವೇಳೆಯಲ್ಲಿ ಬಾಹ್ಯ ಪ್ರಭಾವವನ್ನು ತಡೆಗಟ್ಟಲು ವಿಫಲರಾದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಮಾನತು (ಸಾಂಕೇತಿಕ ಚಿತ್ರ)
ಅಮಾನತು (ಸಾಂಕೇತಿಕ ಚಿತ್ರ)online desk

ತಿರುವನಂತಪುರಂ: ವೃದ್ಧೆಯೊಬ್ಬರು ಮನೆಯಿಂದ ಮತದಾನ ಮಾಡುತ್ತಿದ್ದ ವೇಳೆಯಲ್ಲಿ ಬಾಹ್ಯ ಪ್ರಭಾವವನ್ನು ತಡೆಗಟ್ಟಲು ವಿಫಲರಾದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಉತ್ತರ ಕೇರಳದಲ್ಲಿನ ಜಿಲ್ಲೆಯೊಂದರ ನಿವಾಸಿಯಾಗಿರುವ 92 ವರ್ಷದ ಮಹಿಳೆ ಮನೆಯಿಂದ ಮತದಾನ ಮಾಡಿದ್ದರು.

ಕಳ್ಳಿಯಸ್ಸೆರಿ ಗ್ರಾಮ ಪಂಚಾಯಿತಿಯಿಂದ ವರದಿಯಾದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್, ಜಿಲ್ಲಾ ಚುನಾವಣಾಧಿಕಾರಿಗಳು ವಿಶೇಷ ಚುನಾವಣಾಧಿಕಾರಿ ಮತಗಟ್ಟೆ ಸಹಾಯಕ ಸೂಕ್ಷ್ಮ ವೀಕ್ಷಕರು, ವಿಶೇಷ ಪೊಲೀಸ್ ಅಧಿಕಾರಿ ಮತ್ತು ವಿಡಿಯೋಗ್ರಾಫರ್ ಗಳನ್ನು ಅಮಾನತುಗೊಳಿಸಲಾಗಿದೆ.

92ರ ದೇವಿ ಎಂಬ ವೃದ್ಧೆಗೆ ಪ್ರಜಾಸತ್ತಾತ್ಮಕ ಹಕ್ಕನ್ನು ಸುಲಭಗೊಳಿಸಲು ಏಪ್ರಿಲ್ 18ರಂದು ಅವರ ನಿವಾಸದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತದಾನ ಮಾಡುವುದಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಗಣೇಶನ್ ಎಂಬ ವ್ಯಕ್ತಿಯ ವಿರುದ್ಧ ತನಿಖೆಗೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ.

ಅಮಾನತು (ಸಾಂಕೇತಿಕ ಚಿತ್ರ)
ಕರ್ನಾಟಕ ಲೋಕಸಭೆ ಚುನಾವಣೆ: ಈ ಬಾರಿ ಲೋಕಸಭೆಗೆ ಆಯ್ಕೆಯಾಗುವರೇ ಅಲ್ಪಸಂಖ್ಯಾತ ಅಭ್ಯರ್ಥಿ!

ಕಣ್ಣೂರು ಜಿಲ್ಲೆಯ ಕಲ್ಲಿಯಸ್ಸೆರಿ ವಿಧಾನಸಭಾ ಕ್ಷೇತ್ರವು ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಗಣೇಶನ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿದರೆ, ಭಾರತೀಯ ಜನತಾ ಪಕ್ಷ ಇದು ಚುನಾವಣೆಯನ್ನು ಹಾಳು ಮಾಡುವ ಪ್ರಯತ್ನ ಎಂದು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com