ಲೋಕಸಭಾ ಚುನಾವಣೆ 2024: 2ನೇ ಹಂತದ ಮತದಾನಕ್ಕೆ heat wave ಆತಂಕ; ಆಯೋಗಕ್ಕೆ IMD ಮಾಹಿತಿ

ಲೋಕಸಭಾ ಚುನಾವಣೆ 2024 ರ 2 ನೇ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ಏರುಗತಿಯಲ್ಲಿದ್ದು, heatwave ಆತಂಕ ಮೂಡಿದೆ.
ಮತದಾನ (ಸಾಂಕೇತಿಕ ಚಿತ್ರ)
ಮತದಾನ (ಸಾಂಕೇತಿಕ ಚಿತ್ರ)online desk

ನವದೆಹಲಿ: ಲೋಕಸಭಾ ಚುನಾವಣೆ 2024 ರ 2 ನೇ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ಏರುಗತಿಯಲ್ಲಿದ್ದು, heatwave ಆತಂಕ ಮೂಡಿದೆ.

ಈ ಬಗ್ಗೆ ಹವಾಮಾನ ಇಲಾಖೆ (IMD) ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಏ.26 ರಂದು ನಡೆಯಲಿರುವ ಮತದಾನಕ್ಕೆ heatwave ನ ಆತಂಕ ಇಲ್ಲ ಎಂದು ಹೇಳಿದೆ.

ಮತದಾನ (ಸಾಂಕೇತಿಕ ಚಿತ್ರ)
ಬಿಸಿಲಿನ ಧಗೆಗೆ ತತ್ತರಿಸಿದ ಭಾರತ; ಉತ್ತರದಲ್ಲಿ heat waves ಸೃಷ್ಟಿಸಿದೆ ಭಾರಿ ಅವಾಂತರ!!

2 ನೇ ಹಂತದಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಹವಾಮಾನ ಮುನ್ಸೂಚನೆಯು "ಸಾಮಾನ್ಯವಾಗಿರಲಿದೆ" ಎಂದು ಐಎಂಡಿ ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಕಳವಳದ ನಡುವೆ, ಹವಾಮಾನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಲೋಕಸಭೆ ಚುನಾವಣೆಯ ಅವಧಿಯಲ್ಲಿ ಬಿಸಿ ವಾತಾವರಣದ ಪರಿಸ್ಥಿತಿಗಳಿಂದ ಉಂಟಾಗುವ ಯಾವುದೇ ಅಪಾಯವನ್ನು ತಗ್ಗಿಸುವ ಕ್ರಮಗಳನ್ನು ಚರ್ಚಿಸಲು ಆಯೋಗ ಸೋಮವಾರ (ಏ.22) ರಂದು ಸಂಬಂಧಿಸಿದ ಏಜೆನ್ಸಿಗಳೊಂದಿಗೆ ಸಭೆ ನಡೆಸಿದೆ.

ಮತದಾನ (ಸಾಂಕೇತಿಕ ಚಿತ್ರ)
Heat Stroke ಅಥವಾ ಶಾಖಾಘಾತ: ಲಕ್ಷಣಗಳು, ತ್ವರಿತ ಚಿಕಿತ್ಸೆ (ಕುಶಲವೇ ಕ್ಷೇಮವೇ)

ಏ.19 ರಿಂದ ಜೂ.1 ವರೆಗೆ ದೇಶಾದ್ಯಂತ ವಿವಿಧ ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗ, ಐಎಂಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೇಂದ್ರ ಆರೋಗ್ಯ ಸಚಿವಾಲಯ)ದ ಅಧಿಕಾರಿಗಳು, ಪ್ರತಿ ಮತದಾನದ ಹಂತಕ್ಕೂ 5 ದಿನಗಳ ಮೊದಲು heatwave ನ ಪ್ರಭಾವವನ್ನು ಪರಿಶೀಲಿಸಿ, ಯಾವುದೇ ಆತಂಕಕಾರಿ ಬೆಳವಣಿಗೆಗಳಿದ್ದರೂ ಅದನ್ನು ನಿರ್ವಹಣೆ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ಧರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com