ಜಾತಿಗಣತಿ ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ; 'ದೇಶ ಭಕ್ತ' ಎಂದು ಕರೆದುಕೊಳ್ಳುವವರು ಅದಕ್ಕೆ ಹೆದರುತ್ತಾರೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ (BJP) ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುವವರು ಶೇಕಡ 90ರಷ್ಟು ಜನರಿಗೆ 'ನ್ಯಾಯ' ಕೊಡಿಸುತ್ತಿಲ್ಲ.
ರಾಹುಲ್ ಗಾಂಧಿ
ರಾಹುಲ್ ಗಾಂಧಿTNIE
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ (BJP) ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುವವರು ಶೇಕಡ 90ರಷ್ಟು ಜನರಿಗೆ 'ನ್ಯಾಯ' ಕೊಡಿಸುತ್ತಿಲ್ಲ. ಆದರೆ ಅವರು ಜಾತಿ ಆಧಾರಿತ ಜನಗಣತಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

'ಸಮೃದ್ಧ ಭಾರತ' ಎಂಬ ಸಂಘಟನೆಯು ಇಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದ 90 ಪ್ರತಿಶತದಷ್ಟು ಜನರಿಗೆ ನ್ಯಾಯ ಕೊಡಿಸುವದು 'ನನ್ನ ಜೀವನದ ಧ್ಯೇಯವಾಗಿದೆ'. ಇಂದು ಭಾರತದಲ್ಲಿ ಶೇ.90 ರಷ್ಟು ಜನರು ಭೀಕರ ಅನ್ಯಾಯವನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತೇವೆ ಎಂದು ನಾನು ಹೇಳಿಲ್ಲ, ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದರು. ಇನ್ನು ತಮ್ಮ ಪಕ್ಷದ ಕ್ರಾಂತಿಕಾರಿ ಪ್ರಣಾಳಿಕೆಯಿಂದ ಪ್ರಧಾನಿ ಮೋದಿ ಭಯಗೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಎಷ್ಟು ಅನ್ಯಾಯವಾಗಿದೆ ಎಂದು ತಿಳಿದುಕೊಳ್ಳೋಣ ಎಂದು ಸುಮ್ಮನೆ ಹೇಳಿದಾಗ ಅವರೆಲ್ಲ ಎದ್ದು ನಿಂತು ದೇಶ ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಆದರೆ ಜನಗಣತಿ ಎಂಬ X-ray ಮಾಡೋಣ. ಅದರಿಂದ ಎಷ್ಟು ಜನರಿಗೆ ಅನ್ಯಾಯವಾಗಿದೆ ಎಂದು ತಿಳಿಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಜನಗಣತಿಯನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಭಾರತದ 90 ಪ್ರತಿಶತ ಜನರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು. ಬಿಜೆಪಿಯನ್ನು ಟಾರ್ಗೆಟ್ ಮಾಡಿದ ರಾಹುಲ್ ಗಾಂಧಿ, ಎಲ್ಲಾ ದೇಶಪ್ರೇಮಿಗಳು ಇದನ್ನು ಇಷ್ಟಪಡಬೇಕು... ಒಬ್ಬ ದೇಶಪ್ರೇಮಿ ನ್ಯಾಯವನ್ನು ಬಯಸುತ್ತಾನೆ ಹೊರತು ಅನ್ಯಾಯವನ್ನು ಬಯಸುವುದಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ
ಪಿತ್ರಾರ್ಜಿತ ಆಸ್ತಿ ತೆರಿಗೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ: ಬಿಜೆಪಿ ಕೆಂಡಾಮಂಡಲ; ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್!

ಬಿಜೆಪಿಯ ಜನರು ತಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುತ್ತಾರೆ. ಆದರೆ ಜಾತಿ ಗಣತಿಯ 'ಎಕ್ಸ್-ರೇ'ಗೆ ಹೆದರುತ್ತಾರೆ ಎಂದು ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ 10 ವರ್ಷಗಳ ಹಿಂದೆ ದೇಶಕ್ಕೆ ತಾನು ಒಬಿಸಿ ಎಂದು ಹೇಳಿದ್ದರು. ಜಾತಿ ಆಧಾರಿತ ಜನಗಣತಿ ಮತ್ತು ಎಕ್ಸ್ ರೇ ಬಗ್ಗೆ ಮಾತನಾಡಿದ ತಕ್ಷಣ ನರೇಂದ್ರ ಮೋದಿಯವರು ಜಾತಿ ಇಲ್ಲ ಎಂದು ಹೇಳಿದರು. ಜಾತಿ ಇಲ್ಲ ಎಂದಾದರೆ ಒಬಿಸಿ ಹೇಗೆ? ನನಗೆ ಜಾತಿ ಇಲ್ಲ ಎಂದು ಆ ಕ್ಷಣವೇ ನೀನು ಹೇಳಬೇಕಿತ್ತು ಎಂದು ಹೇಳಬೇಕಿತ್ತು ಎಂದು ಸವಾಲು ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com