JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಫಲಿತಾಂಶ

ಸತತ ಮೂರನೇ ವರ್ಷ, ತೆಲಂಗಾಣ ರಾಜ್ಯ ಜೆಇಇ ಮುಖ್ಯ ಪರೀಕ್ಷೆಗಳಲ್ಲಿ ಶೇಕಡಾ 100ರಷ್ಟು ಅಂಕ ಗಳಿಸಿದ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದೆ. ದಕ್ಷಿಣ ರಾಜ್ಯದ ಸುಮಾರು 15 ಅಭ್ಯರ್ಥಿಗಳು 100 NTA ಅಂಕಗಳನ್ನು ಗಳಿಸಿದ್ದಾರೆ. ಕಳೆದ ಬಾರಿ ಈ ಸಂಖ್ಯೆ 11 ಆಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ದಾಖಲೆಯ 56 ಅಭ್ಯರ್ಥಿಗಳು ಮುಖ್ಯ ಜಂಟಿ ಪ್ರವೇಶ ಪರೀಕ್ಷೆ-ಮುಖ್ಯ (JEEoMain) 2024 ರಲ್ಲಿ ನೂರಕ್ಕೆ ನೂರು ಎನ್‌ಟಿಎ ಅಂಕಗಳನ್ನು ಗಳಿಸಿದ್ದಾರೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಳೆದ ರಾತ್ರಿ ಫಲಿತಾಂಶ ಪ್ರಕಟಿಸಿದೆ.

ಪೂರ್ಣ ಅಂಕಗಳನ್ನು ಗಳಿಸಿದ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ತೆಲಂಗಾಣ ರಾಜ್ಯದವರಾಗಿದ್ದಾರೆ. ಟಾಪರ್ ಅಂಕ ಗಳಿಸಿದ ಇಬ್ಬರು ಮಹಿಳೆಯರಲ್ಲಿ ಒಬ್ಬರು ಕರ್ನಾಟಕದ ಸಾನ್ವಿ ಜೈನ್ ಮತ್ತು ಇನ್ನೊಬ್ಬರು ದೆಹಲಿಯ ಶಯ್ನಾ ಸಿನ್ಹಾ ಆಗಿದ್ದಾರೆ.

ಸತತ ಮೂರನೇ ವರ್ಷ, ತೆಲಂಗಾಣ ರಾಜ್ಯ ಜೆಇಇ ಮುಖ್ಯ ಪರೀಕ್ಷೆಗಳಲ್ಲಿ ಶೇಕಡಾ 100ರಷ್ಟು ಅಂಕ ಗಳಿಸಿದ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದೆ. ದಕ್ಷಿಣ ರಾಜ್ಯದ ಸುಮಾರು 15 ಅಭ್ಯರ್ಥಿಗಳು 100 NTA ಅಂಕಗಳನ್ನು ಗಳಿಸಿದ್ದಾರೆ. ಕಳೆದ ಬಾರಿ ಈ ಸಂಖ್ಯೆ 11 ಆಗಿತ್ತು.

ತೆಲಂಗಾಣ ನಂತರ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅಭ್ಯರ್ಥಿಗಳು ತಲಾ 100 ಎನ್ ಟಿಎ ಅಂಕ ಗಳಿಸಿದ 7 ವಿದ್ಯಾರ್ಥಿಗಳು ಇದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಆಂಧ್ರ ಪ್ರದೇಶದಲ್ಲಿ ಐವರು ಅಭ್ಯರ್ಥಿಗಳು 100 ಎನ್‌ಟಿಎ ಗಳಿಸಿದ್ದರು. ಆರು ಮಂದಿ ಅಭ್ಯರ್ಥಿಗಳೊಂದಿಗೆ ದೆಹಲಿ ಮೂರನೇ ಸ್ಥಾನದಲ್ಲಿದೆ.

56 ಟಾಪರ್‌ಗಳಲ್ಲಿ ಸಾಮಾನ್ಯ ವರ್ಗದಿಂದ 40, OBC ಯಿಂದ 10 ಮತ್ತು Gen-EWS ವರ್ಗದಿಂದ ಆರು ಮಂದಿ ಒಳಗೊಂಡಿದ್ದಾರೆ. ಎಸ್ ಸಿ ಮತ್ತು ಎಸ್ ಟಿ ವರ್ಗಗಳಿಂದ ಯಾವುದೇ ಅಭ್ಯರ್ಥಿಗಳಿಲ್ಲ.

NTA ಜನವರಿ ಮತ್ತು ಏಪ್ರಿಲ್ ತಿಂಗಳ ಸಂಯೋಜಿತ ಪೇಪರ್ 1(ಬಿಇ/ ಬಿ ಟೆಕ್) ಫಲಿತಾಂಶಗಳನ್ನು ಪ್ರಕಟಿಸಿದೆ. ಮೊದಲ ಅವಧಿಗಳಲ್ಲಿ, 23 ವಿದ್ಯಾರ್ಥಿಗಳು ನೂರನೇ NTA ಅಂಕ ಗಳಿಸಿದರು.

ಒಟ್ಟು 10,67,959 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈಗ, 2,50,284 ಅಭ್ಯರ್ಥಿಗಳು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯನ್ನು ಬರೆಯಲು ಅರ್ಹತೆ ಪಡೆಯುತ್ತಾರೆ.

ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅನ್ಯಾಯದ ವಿಧಾನಗಳನ್ನು ಬಳಸಿದ್ದಕ್ಕಾಗಿ ಸುಮಾರು 39 ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲ ಜೆಇಇ-ಮೇನ್ ತೆಗೆದುಕೊಳ್ಳದಂತೆ ಡಿಬಾರ್ ಮಾಡಲಾಗಿದೆ.

ಜೆಇಇ (ಮುಖ್ಯ) ಪರೀಕ್ಷೆಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NITs), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT), ಮತ್ತು ಇತರ ಕೇಂದ್ರೀಯ ಅನುದಾನಿತ ತಾಂತ್ರಿಕ ಕಾಲೇಜುಗಳು ಸೇರಿದಂತೆ ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಇದು JEE (ಸುಧಾರಿತ) ಪರೀಕ್ಷೆಗೆ ಮೂಲ ಅರ್ಹತೆಯ ಪಟ್ಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ನೋಂದಣಿ ಪ್ರಕ್ರಿಯೆ ಇದೇ ಭಾನುವಾರ ಆರಂಭವಾಗಲಿದೆ.

ತಮ್ಮ JEE (ಮುಖ್ಯ) ಕಾರ್ಯಕ್ಷಮತೆಯ ಆಧಾರದ ಮೇಲೆ JEE (ಅಡ್ವಾನ್ಸ್ಡ್) ಪರೀಕ್ಷೆಗೆ NTA ಯ ಕಟ್-ಆಫ್ ಅರ್ಹತೆ ಅಂಕ ಪೂರೈಸುವ ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಅಡ್ವಾನ್ಸ್ ಡ್ ಪರೀಕ್ಷೆ ಬರೆಯಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com