ಪ್ರಧಾನಿ ನರೇಂದ್ರ ಮೋದಿ 'ಅಸತ್ಯಮೇವ ಜಯತೇ' ಸಂಕೇತ: ಜೈರಾಮ್ ರಮೇಶ್

ಲೋಕಸಭೆ ಚುನಾವಣೆಯಲ್ಲಿ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರು ‘ಸುಳ್ಳು’ ಹಬ್ಬಿಸಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ‘ಸಂಪತ್ತಿನ ಮರುಹಂಚಿಕೆ’ ಎಲ್ಲಿದೆ ಎಂಬುದನ್ನು ತೋರಿಸಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
Congress general secretary Jairam Ramesh
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
Updated on

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರು ‘ಸುಳ್ಳು’ ಹಬ್ಬಿಸಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ‘ಸಂಪತ್ತಿನ ಮರುಹಂಚಿಕೆ’ ಎಲ್ಲಿದೆ ಎಂಬುದನ್ನು ತೋರಿಸಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್, ಬಿಜೆಪಿ ಸಿದ್ಧಪಡಿಸಿದ ಪಿಚ್‌ನಲ್ಲಿ ಕಾಂಗ್ರೆಸ್ ಆಡುವುದಿಲ್ಲ ಆದರೆ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳ ಮೇಲೆ ಆಡುತ್ತದೆ. ಪ್ರಧಾನಿ ಮೋದಿ ಅಸತ್ಯಮೇವ ಜಯತೆಯನ್ನು ಸಂಕೇತವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತದ ಟ್ರೆಂಡ್‌ಗಳು ಕೆಲವು ರಾಜ್ಯಗಳಲ್ಲಿ ಬಿಜೆಪಿ "ಅಳಿಸಿಹೋಗಿದೆ" ಎಂದು ತೋರಿಸುತ್ತವೆ. ಕೆಲವು ರಾಜ್ಯಗಳಲ್ಲಿ ಅದರ ಸ್ಥಾನಗಳು 2019 ರ ಚುನಾವಣೆಗೆ ಹೋಲಿಸಿದರೆ ಕಡಿಮೆಯಾಗುತ್ತಿವೆ ಎಂದಿದ್ದಾರೆ.

Congress general secretary Jairam Ramesh
ಎಕ್ಸ್ ನಲ್ಲಿ ಅವಹೇಳನಕಾರಿ ಸುದ್ದಿ: ಖರ್ಗೆ, ಜೈರಾಮ್ ರಮೇಶ್ ಗೆ ನೋಟಿಸ್ ಕಳುಹಿಸಿದ ಗಡ್ಕರಿ

ಪ್ರಧಾನಿ ಮೋದಿ ಅಜೆಂಡಾವನ್ನು ಮತ್ತೊಂದು ದಿಕ್ಕಿನಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ, ಅವರು ಮೊದಲು ನಮ್ಮ ಪ್ರಣಾಳಿಕೆಗೆ ಕೋಮು ಬಣ್ಣ ನೀಡಲು ಪ್ರಯತ್ನಿಸಿದರು ಮತ್ತು ನಂತರ 'ನ್ಯಾಯ ಪತ್ರ'ದಲ್ಲಿ ಇಲ್ಲದ ವಿಷಯಗಳ ಬಗ್ಗೆ ಮಾತನಾಡಿದರು. ತಪ್ಪು ಪ್ರಚಾರ ಮಾಡಿದರೂ ನಮ್ಮ ಪ್ರಣಾಳಿಕೆಗೆ ಪ್ರಚಾರ ನೀಡುತ್ತಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.

ನ್ಯಾಯ್ ಪತ್ರವು ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ ಜನರ ಪ್ರತಿಕ್ರಿಯೆಯನ್ನು ಆಧರಿಸಿ ಸಿದ್ದಪಡಿಸಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ನಿರುದ್ಯೋಗ ಹೆಚ್ಚಾಗಿದೆ, ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುತ್ತಿಲ್ಲ, ಆರ್ಥಿಕ ಅಸಮಾನತೆ ಹೆಚ್ಚಿದೆ ಎಂಬುದು ಸ್ಪಷ್ಟವಾಗಿದೆ. ನಾರಿ ನ್ಯಾಯ್, ಯುವ ನ್ಯಾಯ್, ಕಿಸಾನ್ ನ್ಯಾಯ್, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಮೇಲೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಪ್ರತಿಪಾದಿಸಿದರು. ನಮ್ಮದು ಸಕಾರಾತ್ಮಕ ಅಜೆಂಡಾ, ನಾವು ನಿರುದ್ಯೋಗ, ಬೆಲೆ ಏರಿಕೆ, ಸಂವಿಧಾನ, ಸಂಸ್ಥೆಗಳ ಮೇಲಿನ ದಾಳಿ ಹಾಗೂ ಜನರ ಸಮಸ್ಯೆಗಳ ಸಂಬಂಧ ಚುನಾವಣೆಯಲ್ಲಿ ಹೋರಾಡಲು ಬಯಸುತ್ತೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com