ಲೋಕಸಭಾ ಚುನಾವಣೆ: 2ನೇ ಹಂತದಲ್ಲಿ 88 ಸ್ಥಾನಗಳಿಗೆ ಮತದಾನ, ರಾಹುಲ್, ಹೇಮಾ ಮತ್ತಿತರರು ಕಣದಲ್ಲಿ!

13 ರಾಜ್ಯಗಳ 88 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: 13 ರಾಜ್ಯಗಳ 88 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ.

ಕರ್ನಾಟಕದ 28 ಸ್ಥಾನಗಳ ಪೈಕಿ 14, ರಾಜಸ್ಥಾನದಲ್ಲಿ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 6, ಅಸ್ಸಾಂ ಮತ್ತು ಬಿಹಾರದಲ್ಲಿ ತಲಾ 5, ಕೇರಳದ ಎಲ್ಲಾ 20 ಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ, ಮತ್ತು ಮಣಿಪುರ, ತ್ರಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಹುಲ್ ಗಾಂಧಿ
Lok Sabha Election 2024: ಮೊದಲ ಹಂತದ ಮತದಾನ; ಏಪ್ರಿಲ್‌ 26ರಂದು ಸಾರ್ವತ್ರಿಕ ರಜೆ ಘೋಷಣೆ

ಎರಡನೇ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯಬೇಕಿದ್ದರೂ, ಬಿಎಸ್ ಪಿ ಅಭ್ಯರ್ಥಿ ನಿಧನರಾದ ಕಾರಣ ಮಧ್ಯಪ್ರದೇಶದ ಬೇತುಲ್ ಕ್ಷೇತ್ರಕ್ಕೆ ಮೂರನೇ ಹಂತಕ್ಕೆ ಮತದಾನವನ್ನು ಮರು ನಿಗದಿಪಡಿಸಲಾಗಿದೆ.

15.88 ಕೋಟಿ ಮತದಾರರಿಗಾಗಿ 1.67 ಲಕ್ಷ ಮತಗಟ್ಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ (ಇಸಿ) ತಿಳಿಸಿದೆ.

ಮತದಾರರಲ್ಲಿ 8.08 ಕೋಟಿ ಪುರುಷರು, 7.8 ಕೋಟಿ ಮಹಿಳೆಯರು ಮತ್ತು 5,929 ತೃತೀಯಲಿಂಗಿ ಮತದಾರರಿದ್ದಾರೆ.ಮೊದಲ ಬಾರಿಗೆ 34.8 ಲಕ್ಷ ಮತದಾರರು ತಮ್ಮ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ.

ಹೆಚ್ಚುವರಿಯಾಗಿ, 20-29 ವರ್ಷ ವಯಸ್ಸಿನ 3.28 ಕೋಟಿ ಯುವ ಮತದಾರರಿದ್ದಾರೆ ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ.

ಕಣದಲ್ಲಿರುವ 1,202 ಅಭ್ಯರ್ಥಿಗಳ ಪೈಕಿ 1,098 ಪುರುಷರು, 102 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳಿದ್ದಾರೆ. ಕನಿಷ್ಠ ಮೂರು ಹೆಲಿಕಾಪ್ಟರ್‌ಗಳು, ನಾಲ್ಕು ವಿಶೇಷ ರೈಲುಗಳು ಮತ್ತು ಸುಮಾರು 80,000 ವಾಹನಗಳನ್ನು ಮತದಾನ ಮತ್ತು ಭದ್ರತಾ ಸಿಬ್ಬಂದಿಗೆ ನಿಯೋಜಿಸಲಾಗಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 94 ಸ್ಥಾನಗಳಿಗೆ ಮೂರನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com