ಉಗ್ರ ಕಸಬ್​ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್​ಗೆ ಬಿಜೆಪಿ ಟಿಕೆಟ್; ಮುಂಬೈ ನಾರ್ತ್ ಸೆಂಟ್ರಲ್ ನಿಂದ ಕಣಕ್ಕೆ

ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್​​ನನ್ನು ಗಲ್ಲಿಗೇರಿಸುವಂತೆ ಮಾಡಲು ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್ ಅವರಿಗೆ ಟಿಕೆಟ್ ನೀಡಲಾಗಿದೆ.
ಉಜ್ವಲ್ ನಿಕಮ್
ಉಜ್ವಲ್ ನಿಕಮ್

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 15ನೇ ಪಟ್ಟಿ ಬಿಡುಗಡೆಯಾಗಿದ್ದು, ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್​​ನನ್ನು ಗಲ್ಲಿಗೇರಿಸುವಂತೆ ಮಾಡಲು ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್ ಅವರಿಗೆ ಟಿಕೆಟ್ ನೀಡಲಾಗಿದೆ.

ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದ ಹಾಲಿ ಸಂಸದೆ ಪೂನಂ ಮಹಾಜನ್​ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಬದಲಿಗೆ ಉಜ್ವಲ್ ನಿಕಮ್ ಅವರನ್ನು ಮುಂಬೈ ನಾರ್ತ್ ಸೆಂಟ್ರಲ್ ನಿಂದ ಕಣಕ್ಕಿಳಿಸಲಾಗಿದೆ.

1993 ರ ಮುಂಬೈ ಸರಣಿ ಸ್ಫೋಟ ಮತ್ತು 26/11 ದಾಳಿಯ ನಂತರ ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್‌ನ ವಿಚಾರಣೆಯಂತಹ ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ನಿಕಮ್ ಅವರು, ಕಾಂಗ್ರೆಸ್‌ನ ಮುಂಬೈ ಘಟಕದ ಮುಖ್ಯಸ್ಥೆ ಮತ್ತು ಧಾರವಿ ಶಾಸಕ ವರ್ಷಾ ಗಾಯಕ್‌ವಾಡ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಉಜ್ವಲ್ ನಿಕಮ್
ಲೋಕಸಭೆ ಚುನಾವಣೆ 2024: ಬಿಜೆಪಿ 8ನೇ ಪಟ್ಟಿ ಬಿಡುಗಡೆ, ನಟ ಸನ್ನಿ ಡಿಯೋಲ್ ಗೆ ಕೊಕ್, ಹಲವು ಅಚ್ಚರಿ ಅಭ್ಯರ್ಥಿಗಳು ಕಣದಲ್ಲಿ!

ಅನೇಕ ಸಮೀಕ್ಷೆಗಳಲ್ಲಿ ಸಂಸದೆ ಪೂನಂ ಮಹಾಜನ್​ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಹಾಲಿ ಸಂಸದೆ ಪೂನಂ ಮಹಾಜನ್ ಅವರನ್ನು ಕೈಬಿಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com