22 ಭಾರತೀಯರಿದ್ದ ಪನಾಮ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಹೌತಿ ಉಗ್ರರಿಂದ ದಾಳಿಗೆ ಒಳಗಾಗಿದ್ದ ಪನಾಮ ಹಡಗನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.
22 ಭಾರತೀಯರಿದ್ದ ಪನಾಮ ಹಡಗು
22 ಭಾರತೀಯರಿದ್ದ ಪನಾಮ ಹಡಗುonline desk

ನವದೆಹಲಿ: ಹೌತಿ ಉಗ್ರರಿಂದ ದಾಳಿಗೆ ಒಳಗಾಗಿದ್ದ ಪನಾಮ ಹಡಗನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.

ಪನಾಮ ಹಡಗಲ್ಲಿ 22 ಮಂದಿ ಭಾರತೀಯರು ಸೇರಿ 30 ಸಿಬ್ಬಂದಿಗಳು ಇದ್ದರು. ಈ ಹಡಗು ಹೌತಿ ಉಗ್ರರ ಕ್ಷಿಪಣಿ ದಾಳಿಯನ್ನು ಎದುರಿಸಿತ್ತು.

22 ಭಾರತೀಯರಿದ್ದ ಪನಾಮ ಹಡಗು
ಇರಾನ್ ವಶದಲ್ಲಿ ಇಸ್ರೇಲ್ ಹಡಗು: 17 ನಾವಿಕರ ಭೇಟಿಗೆ ಭಾರತೀಯ ಅಧಿಕಾರಿಗಳಿಗೆ ಅನುಮತಿ!

ಭಾರತೀಯ ನೌಕಾಪಡೆಯ ವಿಧ್ವಂಸಕ INS ಕೊಚ್ಚಿ, ಎಂವಿ ಆಂಡ್ರೊಮಿಡಾ ಸ್ಟಾರ್ ಹಡಗಿನ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯೆ ನೀಡಿದ್ದು, ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಇರಾನ್ ಬೆಂಬಲಿತ ಹೌತಿ ಉಗ್ರಗಾಮಿಗಳು ಯೆಮೆನ್‌ನಿಂದ ಕೆಂಪು ಸಮುದ್ರಕ್ಕೆ ಮೂರು ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವ್ಯಾಪಾರಿ ಹಡಗು ಮೈಶಾ ಮತ್ತು ಎಂವಿ ಆಂಡ್ರೊಮಿಡಾ ಸ್ಟಾರ್ ಬಳಿ ಉಡಾವಣೆ ಮಾಡಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ.

MV ಆಂಡ್ರೊಮಿಡಾ ಸ್ಟಾರ್ ಪನಾಮನ್-ಧ್ವಜ ಹೊಂದಿರುವ ಮತ್ತು ಸೀಶೆಲ್ಸ್-ಚಾಲಿತ ಹಡಗಾಗಿದೆ. ನೌಕೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.

"ಭಾರತೀಯ ನೌಕಾಪಡೆಯ ವಿಧ್ವಂಸಕ ನೌಕೆ ಐಎನ್ಎಸ್ ಕೊಚ್ಚಿಯನ್ನು ನಿಯೋಜಿಸಲಾಗಿದ್ದು, ಏಪ್ರಿಲ್ 26 ರಂದು ಪನಾಮ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಎಂವಿ ಆಂಡ್ರೊಮಿಡಾ ಸ್ಟಾರ್ ಮೇಲೆ ನಡೆದ ದಾಳಿಯನ್ನು ಒಳಗೊಂಡ ಕಡಲ ಭದ್ರತಾ ಘಟನೆಗೆ ಪ್ರತಿಕ್ರಿಯಿಸಿದೆ" ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com