ಛತ್ತೀಸ್ ಗಢ: ಟ್ರಕ್ ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ, 8 ಮಂದಿ ಸಾವು, 23 ಮಂದಿಗೆ ಗಾಯ

ಗೂಡ್ಸ್ ವಾಹನ ಜಖಂ ಆಗಿರುವುದು
ಗೂಡ್ಸ್ ವಾಹನ ಜಖಂ ಆಗಿರುವುದು

ಬೆಮೆಟರಾ: ಛತ್ತೀಸ್ ಗಢದ ಬೆಮೆಟರಾ ಜಿಲ್ಲೆಯಲ್ಲಿ ಗೂಡ್ಸ್ ವಾಹನವೊಂದು ಟ್ರಕ್ ಗೆ ಡಿಕ್ಕಿಯಲ್ಲಿ ಅದರಲ್ಲಿ ಸಂಚರಿಸುತ್ತಿದ್ದ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಮೃತಪಟ್ಟು 23 ಮಂದಿ ಗಾಯಗೊಂಡಿದ್ದಾರೆ.

ಕಳೆದ ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು ಕಥಿಯಾ ಗ್ರಾಮದಲ್ಲಿ ಕುಟುಂಬ ಸಮಾರಂಭವೊಂದರಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮೃತರು ಪತರ್ರ ಗ್ರಾಮದವರಾಗಿದ್ದು, ತಿರೈಯ್ಯಾ ಗ್ರಾಮದಿಂದ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದರು. ರಸ್ತೆಬದಿ ನಿಲ್ಲಿಸಿದ್ದ ಮಿನಿ ಟ್ರಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಬೂರಿ ನಿಶಾದ್(50ವ), ನೀರಾ ಸಾಹು(55ವ), ಗೀತಾ ಸಾಹು(60ವ), ಅಗ್ನಿಯಾ ಸಾಹು(60ವ), ಖುಷ್ಬು ಸಾಹು(39ವ), ಮಧು ಸಾಹು(5ವ) ರಿಕೇಶ್ ನಿಶಾದ್(6ವ) ಮತ್ತು ಟ್ವಿಂಕಲ್ ನಿಶಾದ್(6ವ) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಎರಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ನಾಲ್ವರನ್ನು ರಾಯ್ ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com