ಕೇರಳ ಭೂಕುಸಿತ: ಅನಾಥ ಮಗುವನ್ನು ದತ್ತು ಪಡೆಯಲು ವಯನಾಡು ದಂಪತಿ ಮುಂದು!

ಸಜಿತ್ (43) ಮತ್ತು ಅವರ ಪತ್ನಿ ನಫೀಜಾ (40) ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದಿದ್ದು ಮಗುವಿಗೆ ಚಿಕ್ಕು ಎಂದು ನಾಮಕರಣ ಮಾಡಿದ್ದಾರೆ.
ಸಜಿತ್ ಮತ್ತು ನಫೀಜಾ
ಸಜಿತ್ ಮತ್ತು ನಫೀಜಾ
Updated on

ಚೆನ್ನೈ: ನಾಲ್ಕು ಮಕ್ಕಳನ್ನು ಹೊಂದಿರುವ ವಯನಾಡಿನ ದಂಪತಿಗಳು ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಅನಾಥವಾಗಿದ್ದ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 300 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು , ನಾಪತ್ತೆಯಾಗಿರುವ 200 ಕ್ಕೂ ಹೆಚ್ಚು ಜನರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ದುರಂತದ ಹಿನ್ನೆಲೆಯಲ್ಲಿ, ಭೂಕುಸಿತ ಪೀಡಿತ ಪ್ರದೇಶದಲ್ಲಿರುವ ಅನಾಥ ನವಜಾತ ಶಿಶುಗಳಿಗೆ ಹಾಲುಣಿಸುವುದಾಗಿ ಇಡುಕ್ಕಿಯ ಮಹಿಳೆ ಭಾವನಾ ಸಜಿನ್ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ವಯನಾಡ್‌ನ ದಂಪತಿಗಳು ವಿಪತ್ತು ವಲಯದಿಂದ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ದತ್ತು ಸ್ವೀಕರಿಸುವ ಮಗುವಿಗೆ ಹೆಸರನ್ನು ಕೂಡ ಆಯ್ಕೆ ಮಾಡಿದ್ದಾರೆ. ಸಜಿತ್ (43) ಮತ್ತು ಅವರ ಪತ್ನಿ ನಫೀಜಾ (40) ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದಿದ್ದು ಮಗುವಿಗೆ ಚಿಕ್ಕು ಎಂದು ನಾಮಕರಣ ಮಾಡಿದ್ದಾರೆ.

1990 ರ ದಶಕದಲ್ಲಿ ವಯನಾಡಿನ ವೈತಿರಿ ಗ್ರಾಮದಲ್ಲಿ, 19 ವರ್ಷದ ಆಟೋ ಚಾಲಕ, ಸಜಿತ್ ತಮ್ಮ ಜೀವನದಲ್ಲಿ ಎಂದಿಗೂ ಮರೆಯಲಾಗದ ನೆನಪಿನ ಘಟನೆ ಅನುಭವಿಸಿದರು. ವೈತಿರಿ ಮೂಲಕ ವಾಹನ ಚಲಾಯಿಸುತ್ತಿದ್ದಾಗ, ಮಹಿಳೆಯೊಬ್ಬರು ಸಜಿತ್ ಬಳಿ ಡ್ರಾಪ್ ಕೇಳಿದರು. ಆಕೆಯ ಬಳಿ ಒಂದು ಸಣ್ಣ ಚೀಲವಿತ್ತು. ಆಕೆ ಇಳಿಯುವ ಮೊದಲು ಚೀಲವನ್ನು ಬಿಟ್ಟು ಹೋಗಿದಳು. ಸಜಿತ್ ಆಟೋ ಸ್ಟ್ಯಾಂಡ್‌ಗೆ ಹಿಂತಿರುಗಿದಾಗ ಬ್ಯಾಗ್‌ನಿಂದ ಮಗುವಿನ ಅಳುವುದು ಕೇಳಿಸಿತು. ಒಳಗೆ, ಅವರು ನವಜಾತ ಗಂಡು ಮಗುವನ್ನು ಕಂಡು ಸಜಿತ್ ತಬ್ಬಿಬ್ಬಾದರು. ಆ ವೇಳೆ ನಾನು ತುಂಬಾ ಚಿಕ್ಕವನಾಗಿದ್ದೆ, ಒಂದು ವೇಳೆ ಮಗುವನ್ನು ಮನೆಗೆ ತೆಗೆದುಕೊಂಡು ಹೋದರೇ ತಮ್ಮ ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಭಯಗೊಂಡಿದ್ದರು, ಹೀಗಾಗಿ ಮಗುವನ್ನು ಮನೆಗೆ ಕರೆದೊಯ್ಯುವ ಬದಲು ಹತ್ತಿರದ ಕಾನ್ವೆಂಟ್‌ಗೆ ಕರೆದೊಯ್ಯಲು ನಿರ್ಧರಿಸಿದನು.

ಮರುದಿನ, ಸಜಿತ್ ಮಗುವನ್ನು ಭೇಟಿ ಮಾಡಲು ಪ್ರಯತ್ನಿಸಿದರು, ಆದರೆ ಕಾನ್ವೆಂಟ್ ಅವರನ್ನು ಒಳಗೆ ಬಿಡಲಿಲ್ಲ. ವರ್ಷಗಳು ಕಳೆದವು, ಮತ್ತು ಸಜಿತ್ ನಫೀಸಾರನ್ನು ಮದುವೆಯಾದರು. ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಫಯೀಸಾ, ಫಹೀಮಾ, ಫಾಹಿದಾ ಮತ್ತು ಫಾತಿಮಾ. ದಂಪತಿ ತನ್ನ ಹೆಣ್ಣುಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ತೊರೆದುಹೋದ ಗಂಡು ಮಗುವಿನ ನೆನಪು ಸಜಿತ್ ಜೊತೆಯೇ ಉಳಿದುಕೊಂಡಿದ್ದು ಗಂಡು ಮಗುವಿಗಾಗಿ ಹಂಬಲಿಸತ್ತಿದ್ದರು.

ಸಜಿತ್ ಮತ್ತು ನಫೀಜಾ
Wayanad landslide: ಕರ್ನಾಟಕದ 40-45 ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ; ಮಡುಗಟ್ಟಿದ ದುಃಖ, ಕಣ್ಣೀರು!

ಸಜಿತ್ ಜೀವನ ನಿರ್ವಹಿಸಲು ಚಿಕ್ಕ ವಯಸ್ಸಿನಿಂದಲೂ ವಿವಿಧ ಕೆಲಸಗಳನ್ನು ಮಾಡುತ್ತಿದ್ದು, ನಂತರ ತಮ್ಮ ಕುಟುಂಬವನ್ನು ಪೋಷಿಸಲು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದರು.ನಾಲ್ಕು ಮಕ್ಕಳಿದ್ದರೂ ಸಜಿತ್ ಗೆ ಗಂಡು ಮಗು ಬೇಕೆಂಬ ಹಂಬಲ ಹೋಗಿರಲಿಲ್ಲ. ಸಜಿತ್ ಅವರ ಪತ್ನಿ ಮತ್ತು ಪುತ್ರಿಯರು ಮಗುವಿನ ಹಿನ್ನೆಲೆ ಅಥವಾ ಧರ್ಮವನ್ನು ಲೆಕ್ಕಿಸದೆ ಮಗುವನ್ನು ದತ್ತು ತೆಗೆದುಕೊಳ್ಳುವ ಅವರ ಬಯಕೆಗೆ ಬೆಂಬಲ ನೀಡಿದರು. "ನನ್ನ ಕುಟುಂಬ ಸಂತೋಷವಾಗಿದ್ದರೆ ಇತರರು ಏನು ಯೋಚಿಸುತ್ತಾರೆ ಎಂದು ನಾನು ಹೆದರುವುದಿಲ್ಲ ಎಂದು ಸಜಿತ್ ಹೇಳಿದ್ದಾರೆ

ಒಂದು ದಿನ, ಸಜಿತ್ ತನ್ನ ಹೆಂಡತಿ ಮತ್ತು ಅತ್ತೆಯೊಂದಿಗೆ ಆಸ್ಪತ್ರೆಯಲ್ಲಿದ್ದಾಗ, ಚಿಕ್ಕುತನ್ ಎಂಬ ಏಳು ವರ್ಷದ ಹುಡುಗನನ್ನು ಭೇಟಿಯಾದನು. ಆ ಹುಡುಗ ಅವರಿಗೆ ಔಷಧೋಪಚಾರದಲ್ಲಿ ಸಹಾಯ ಮಾಡಿದ್ದ, ಮತ್ತು ಸಜಿತ್ ಅವರು ಎಂದಾದರೂ ಗಂಡು ಮಗುವನ್ನು ದತ್ತು ಕೊಂಡರೆ ಅವರಿಗೆ ಚಿಕ್ಕುತನ್ ಎಂದು ಹೆಸರಿಡಲು ನಿರ್ಧರಿಸಿದರು. ವಯನಾಡ್ ಭೂಕುಸಿತದ ನಂತರ, ಸಜಿತ್ ಮತ್ತು ಅವರ ಕುಟುಂಬವು ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿತು. ಒಮ್ಮೆ ಸಿಕ್ಕ ಗಂಡು ಮಗುವಿನ ನೆನಪು ಮತ್ತು ಮಗನನ್ನು ಹೊಂದುವ ಕನಸಿನಿಂದ ಅನಾಥರಿಗೆ ಕಾಳಜಿ ಒದಗಿಸಲು ಸಜಿತ್ ನಿರ್ಧರಿಸಿದ್ದಾರೆ. ಯುವ ಆಟೋ ಡ್ರೈವರ್‌ನಿಂದ ಪ್ರೀತಿಯ ತಂದೆಯವರೆಗೆ, ಪ್ರೀತಿಯ ಶಕ್ತಿ ಮತ್ತು ಅನಿರೀಕ್ಷಿತ ಘಟನೆಗಳು ನಮ್ಮ ಜೀವನವನ್ನು ಹೇಗೆ ರೂಪಿಸುತ್ತವೆ ಎಂಬುದು ಸಜಿತ್ ಕಥೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com