ಹಿಮಾಚಲ ಪ್ರದೇಶ: ಭಾರಿ ಮಳೆ ಕಾರಣ 87 ರಸ್ತೆಗಳು ಬಂದ್

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕುಲುವಿನಲ್ಲಿ 30, ಮಂಡಿಯಲ್ಲಿ 25, ಲಾಹೌಲ್ ಮತ್ತು ಸ್ಪಿತಿಯಲ್ಲಿ 14, ಶಿಮ್ಲಾದಲ್ಲಿ 9, ಕಂಗ್ರಾದಲ್ಲಿ 7 ಮತ್ತು ಕಿನ್ನೌರ್ ಜಿಲ್ಲೆಯಲ್ಲಿ 2 ರಸ್ತೆಗಳನ್ನು ಬಂದ್ ಮಾಡಲಾಗಿದೆ.
Himachala pradesh
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)online
Updated on

ಡೆಹ್ರಾಡೂನ್: ಭಾರಿ ಮಳೆಗೆ ಹಿಮಾಚಲ ಪ್ರದೇಶದ 87 ರಸ್ತೆಗಳು ಸ್ಥಗಿತಗೊಂಡಿವೆ. ಹಲವೆಡೆ ಮೇಘಸ್ಫೋಟ ಸಂಭವಿಸಿದ್ದು, ಕಳೆದ 5 ದಿನಗಳಿಂದ ಭಾರಿ ಮಳೆಗೆ ಪ್ರವಾಹ, ಭೂಕುಸಿತ ಉಂಟಾಗಿದೆ.

ಸ್ಥಳೀಯ ಹವಾಮಾನ ಇಲಾಖೆ ನಿರ್ದಿಷ್ಟ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಆ.08 ವರೆಗೆ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕುಲುವಿನಲ್ಲಿ 30, ಮಂಡಿಯಲ್ಲಿ 25, ಲಾಹೌಲ್ ಮತ್ತು ಸ್ಪಿತಿಯಲ್ಲಿ 14, ಶಿಮ್ಲಾದಲ್ಲಿ 9, ಕಂಗ್ರಾದಲ್ಲಿ 7 ಮತ್ತು ಕಿನ್ನೌರ್ ಜಿಲ್ಲೆಯಲ್ಲಿ 2 ರಸ್ತೆಗಳನ್ನು ಬಂದ್ ಮಾಡಲಾಗಿದೆ.

41 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 66 ನೀರು ಸರಬರಾಜು ಯೋಜನೆಗಳು ಸಹ ಅಸ್ತವ್ಯಸ್ತಗೊಂಡಿವೆ ಎಂದು ಕೇಂದ್ರ ತಿಳಿಸಿದೆ.

ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಧ್ಯಂತರ ಮಳೆಯಾಗಿದ್ದು, ಶುಕ್ರವಾರ ಸಂಜೆಯಿಂದ ಹಮೀರ್‌ಪುರದಲ್ಲಿ 54 ಮಿಮೀ ಅತಿ ಹೆಚ್ಚು ಮಳೆಯಾಗಿದೆ, ನಂತರ ಬರ್ಥಿನ್ ಮತ್ತು ಧರ್ಮಶಾಲಾ ತಲಾ 19 ಮಿಮೀ, ನೇರಿ 11 ಮಿಮೀ, ಕಂಗ್ರಾ 9.7 ಮಿಮೀ, ಕುಕುಮ್‌ಸೇರಿ 9.6 ಮಿಮೀ, ಸುಂದರನಗರ 8.1 ಮಿಮೀ, ಮನಾಲಿ ಮತ್ತು ಚಂಬಾ ತಲಾ 6 ಮಿ.ಮೀ ಮತ್ತು ಬಜೌರಾದಲ್ಲಿ 5 ಮಿ.ಮೀ ಮಳೆಯಾಗಿದೆ.

Himachala pradesh
Weather Alert: ಕರ್ನಾಟಕದಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ; ಕರಾವಳಿಗೆ ಆರೆಂಜ್, ಮಲೆನಾಡಿಗೆ ಎಲ್ಲೋ ಅಲರ್ಟ್- ಹವಾಮಾನ ಇಲಾಖೆ

ದುರ್ಬಲ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹಗಳು ಮತ್ತು ಬಲವಾದ ಗಾಳಿಯಿಂದಾಗಿ ತೋಟಗಳು ಮತ್ತು ನಿಂತಿರುವ ಬೆಳೆಗಳು, ದುರ್ಬಲ ರಚನೆಗಳು ಮತ್ತು 'ಕಚ್ಚಾ' ಮನೆಗಳಿಗೆ ಹಾನಿ ಮತ್ತು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗುವ ಸಾಧ್ಯತೆಯ ಬಗ್ಗೆಯೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com