
ಶ್ರೀನಗರ: ಅಮರನಾಥ ಯಾತ್ರೆಗೆ ಶ್ರೀನಗರದ ಬೇಸ್ ಕ್ಯಾಂಪ್ ನಿಂದ ಪಹಲ್ಗಾಮ್ ಕಡೆಗೆ ಮತ್ತೊಂದು ಯಾತ್ರಾರ್ಥಿಗಳ ತಂಡ ಭಾನುವಾರ ಬೆಳಿಗ್ಗೆ ಹೊರಟಿತು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಅಡೆತಡೆ ಎದುರಿಸುತ್ತಿದ್ದರೂ, ಯಾತ್ರಿಕರು ವ್ಯವಸ್ಥೆಗಳ ಬಗ್ಗೆ ಸಕಾರಾತ್ಕವಾಗಿ ಪ್ರತಿಕ್ರಿಯಿಸಿದರು. ಅಲ್ಲದೇ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಲು ಉತ್ತಮ ಹವಾಮಾನವನ್ನು ಆಶಿಸಿದರು.
ಕರ್ನಾಟಕದ ಯಾತ್ರಾರ್ಥಿಯೊಬ್ಬರು, "ಬಾಬಾನಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಬೈಕ್‌ನಲ್ಲಿ ಪಹಲ್ಗಾಮ್‌ಗೆ ಪ್ರಯಾಣಿಸುತ್ತಿದ್ದೇನೆ. ವ್ಯವಸ್ಥೆಗಳು ನಿಜವಾಗಿಯೂ ಚೆನ್ನಾಗಿವೆ ಎಂದು ಹೇಳಿದರು.
ಶಿಲ್ಲಾಂಗ್‌ನ ಯಾತ್ರಿಕರಾದ ಸರದ್ ಪ್ರಧಾನ್, ಹೆಂಡತಿಯೊಂದಿಗೆ ಮೊದಲ ಬಾರಿಗೆ ಬಂದಿದ್ದೇನೆ. ವ್ಯವಸ್ಥೆಗಳು ತುಂಬಾ ಚೆನ್ನಾಗಿವೆ, ಮತ್ತು ಹವಾಮಾನ ಪರಿಸ್ಥಿತಿ ಸುಧಾರಿಸಿದರೆ ಪ್ರಯಾಣವನ್ನು ಪೂರ್ಣಗೊಳಿಸಬಹುದು ಎಂದರು.
ಈ ಮಧ್ಯೆ ಹವಾಮಾನ ವೈಪರೀತ್ಯದಿಂದಾಗಿ ಭಾನುವಾರ ಬಾಲ್ಟಾಲ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಮೊನ್ನೆ ಶನಿವಾರ ಮತ್ತೊಂದು ಬ್ಯಾಚ್ ಕೂಡ ಅಮರನಾಥ ಯಾತ್ರೆಗೆ ತೆರಳಿತ್ತು. ಜೂನ್ 29 ರಂದು ಬಾಲ್ಟಾಲ್ ಮತ್ತು ಪಹಲ್ಗಾಮ್ ಬೇಸ್ ಕ್ಯಾಂಪ್‌ನಿಂದ ಅಧಿಕೃತವಾಗಿ ಪ್ರಾರಂಭವಾದ ಯಾತ್ರೆಯು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.
ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳ ಗಮನಾರ್ಹ ಹೆಚ್ಚಳದ ನಡುವೆ ಅಮರನಾಥ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ.
Advertisement