ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲು!

ಜುಲೈ ಮೊದಲ ವಾರದಲ್ಲಿಯೂ ಅಡ್ವಾಣಿ ಅವರನ್ನು ಈ ಆಸ್ಪತ್ರೆಗೆ ಕರೆತಂದು ಒಂದೆರಡು ದಿನಗಳ ಕಾಲ ನಿಗಾದಲ್ಲಿರಿಸಿ ನಂತರ ಡಿಸ್ಚಾರ್ಜ್ ಮಾಡಲಾಗಿತ್ತು.
ಎಲ್ ಕೆ ಅಡ್ವಾಣಿ
ಎಲ್ ಕೆ ಅಡ್ವಾಣಿ
Updated on

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ರಾಷ್ಟ್ರ ರಾಜಧಾನಿಯ ಪ್ರಮುಖ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

96 ವರ್ಷದ ಅಡ್ವಾಣಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ. ಜುಲೈ ಮೊದಲ ವಾರದಲ್ಲಿಯೂ ಅಡ್ವಾಣಿ ಅವರನ್ನು ಈ ಆಸ್ಪತ್ರೆಗೆ ಕರೆತಂದು ಒಂದೆರಡು ದಿನಗಳ ಕಾಲ ನಿಗಾದಲ್ಲಿರಿಸಿ ನಂತರ ಡಿಸ್ಚಾರ್ಜ್ ಮಾಡಲಾಗಿತ್ತು.

ಎಲ್ ಕೆ ಅಡ್ವಾಣಿ
ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ, ವೈದ್ಯರ ನಿಗಾ

ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ.ವಿನಿತ್ ಸೂರಿ ಅವರ ನೇತೃತ್ವದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಕ್ಕೂ ಮುನ್ನಾ ಅವರನ್ನುಏಮ್ಸ್ ಗೆ ದಾಖಲಿಸಲಾಗಿತ್ತು. ಅಲ್ಲಿ ಒಂದು ರಾತ್ರಿ ತಂಗಿದ್ದ ನಂತರ ಡಿಸ್ಚಾರ್ಚ್ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com