ಮಣಿಪುರದಲ್ಲಿ ಗುಂಡಿನ ದಾಳಿ: ಕುಕಿ-ಝೋ ಗುಂಪುಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವು

ಆಂತರಿಕ ಕಲಹದಿಂದ ಹಿಂಸಾಚಾರ ಆರಂಭವಾಗಿ ನಂತರ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಗ್ರಾಮದ ಮೂವರು ಸ್ವಯಂಸೇವಕರು ಮತ್ತು UKLF ಸದಸ್ಯ ಸಾವನ್ನಪ್ಪಿದ್ದಾನೆ.
ಭಾರತೀಯ ಸೇನೆ
ಭಾರತೀಯ ಸೇನೆTNIE
Updated on

ಇಂಫಾಲ್(ಮಣಿಪುರ): ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮಣಿಪುರದ ತೆಂಗ್‌ನೌಪಾಲ್ ಜಿಲ್ಲೆಯ ಮೊಲ್ನೊಮ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮೊಲ್ನೊಮ್ ಪಲೆಲ್ ಮತ್ತು ಮೊಲ್ನೋಮ್ ನಲ್ಲಿ ನಿಷೇಧಿತ ದಂಗೆಕೋರ ಗುಂಪು ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ (UKLF) ಮತ್ತು ಗ್ರಾಮ ಸ್ವಯಂಸೇವಕರ ನಡುವೆ ಗುಂಡಿನ ದಾಳಿ ನಡೆದಿತ್ತು.

ಆಂತರಿಕ ಕಲಹದಿಂದ ಹಿಂಸಾಚಾರ ಆರಂಭವಾಗಿ ನಂತರ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಗ್ರಾಮದ ಮೂವರು ಸ್ವಯಂಸೇವಕರು ಮತ್ತು UKLF ಸದಸ್ಯ ಸಾವನ್ನಪ್ಪಿದ್ದಾನೆ.

ಮೊಲ್ನೊಮ್ ಪಲೆಲ್ ಮತ್ತು ಮೊಲ್ನೊಮ್ ನಡುವೆ ಸುಮಾರು 1.5 ಕಿಲೋಮೀಟರ್ ದೂರವಿದೆ. ಪ್ರತೀಕಾರವಾಗಿ, ವಿಲೇಜ್ ವಾಲಂಟೀರ್ ಫೋರ್ಸ್ (ವಿವಿಎಫ್) ಸದಸ್ಯರು ಯುಕೆಎಲ್ಎಫ್ ನಾಯಕ ಎಸ್ಎಸ್ ಹಾಕಿಪ್ ಅವರ ನಿವಾಸವನ್ನು ಗುರಿಯಾಗಿಟ್ಟುಕೊಂಡು ಅವರ ಮನೆಗೆ ಬೆಂಕಿ ಹಚ್ಚಿದರು. ಘಟನೆ ಕುರಿತು ಮಾಹಿತಿ ಪಡೆದ ಭದ್ರತಾ ಪಡೆಗಳು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ.

ಭಾರತೀಯ ಸೇನೆ
ಮಣಿಪುರ: ಹೈಕೋರ್ಟಿನಲ್ಲಿ ಕುಕಿ-ಝೋ ಶಿಕ್ಷಣ ತಜ್ಞರ ಪರ ವಕಾಲತ್ತು ವಹಿಸಿದ ವಕೀಲರ ಮನೆ ಮೇಲೆ ಗುಂಪು ದಾಳಿ, ಧ್ವಂಸ!

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಗುಂಡಿನ ದಾಳಿಯನ್ನು ದೃಢಪಡಿಸಿದ್ದಾರೆ. ಆದರೆ ಸಾವುನೋವುಗಳ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಪ್ರದೇಶಕ್ಕೆ ಧಾವಿಸಿವೆ ಎಂದು ಅವರು ರಾಜ್ಯ ವಿಧಾನಸಭೆಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com