ಉತ್ತರ ಪ್ರದೇಶ: ಮಲ ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ!

ರಕ್ಷಣಾ ಗೃಹದಲ್ಲಿ ತಂಗಿದ್ದ ಬಾಲಕಿ ಜೂನ್ 2021ರಲ್ಲಿ ಶ್ರಾವಸ್ತಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದ ನಂತರ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಶ್ರಾವಸ್ತಿ: ಅಪ್ರಾಪ್ತ ವಯಸ್ಸಿನ ತನ್ನ ಮಲ ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊರ್ವನಿಗೆ ಉತ್ತರ ಪ್ರದೇಶದ ಶ್ರಾವಸ್ತಿಯ ನ್ಯಾಯಾಲಯವೊಂದು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2019ರಲ್ಲಿ ನಡೆದಿದ್ದ ಘಟನೆ ಕುರಿತು ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಪೋಕ್ಸೊ) ನಿರ್ದೋಶ್ ಕುಮಾರ್ ಅಪಾಧಿತ ತಂದೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ದಂಡ ಪಾವತಿಸದಿದ್ದರೆ, ಅಪರಾಧಿ ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಸಂಪೂರ್ಣ ದಂಡದ ಮೊತ್ತವನ್ನು ಬಾಲಕಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಶ್ರಾವಸ್ತಿ ಜಿಲ್ಲಾ ಸರ್ಕಾರಿ ವಕೀಲ ಕೆ.ಪಿ.ಸಿಂಗ್ ಹೇಳಿದ್ದಾರೆ.

ರಕ್ಷಣಾ ಗೃಹದಲ್ಲಿ ತಂಗಿದ್ದ ಬಾಲಕಿ ಜೂನ್ 2021ರಲ್ಲಿ ಶ್ರಾವಸ್ತಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದ ನಂತರ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿತ್ತು. ಎರಡು ವರ್ಷಗಳ ಹಿಂದೆ, ತನಗೆ 15 ವರ್ಷದವಳಿದ್ದಾಗ, ತನ್ನ ಮಲತಂದೆ ತನ್ನ ಮೇಲೆ ಅತ್ಯಾಚಾರವೆಸಗಿದ್ದರಿಂದ ಮನೆ ತೊರೆದಿದ್ದಾಗಿ ಆಕೆ ಪತ್ರದಲ್ಲಿ ಉಲ್ಲೇಖಿಸಿದ್ದಳು.

ನಾವಡಾದಲ್ಲಿ ಪತ್ತೆ ಹಚ್ಚಿದ ಬಿಹಾರ ಪೊಲೀಸರು ಬೋಧಗಯಾದಲ್ಲಿನ ಬಾಲಕಿಯರ ರಕ್ಷಣಾ ಗೃಹದಲ್ಲಿ ಇರಿಸಿದರು. ಆಕೆಯನ್ನು ಶ್ರಾವಸ್ತಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಸಮಿತಿಯು ಆಕೆಯನ್ನು ರಕ್ಷಣಾ ಗೃಹದಲ್ಲಿ ಇರಿಸಿದೆ.

ಸಾಂದರ್ಭಿಕ ಚಿತ್ರ
ಅಯೋಧ್ಯೆ: ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ, ಎಸ್‌ಪಿ ನಾಯಕನ ಮನೆ, ಬೇಕರಿ ಧ್ವಂಸ!

ಆಗಿನ ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ, ಜೂನ್ 3, 2021 ರಂದು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆರೋಪಿ ವಿರುದ್ಧ ಮೇಲೆ ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com