
ಲಖನೌ: ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಎಲ್ಲಾ 10 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ.
ಕರ್ಹಾಲ್, ಮಿಲ್ಕಿಪುರ್, ಕತೇಹಾರಿ, ಕುಂದರ್ಕಿ, ಘಾಜಿಯಾಬಾದ್, ಖೈರ್, ಮೀರಾಪುರ್, ಫುಲ್ಪುರ್, ಮಜವಾನ್ ಮತ್ತು ಸಿಸಾಮೌ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಚುನಾವಣಾ ಆಯೋಗ ಶೀಘ್ರವೇ ಘೋಷಣೆ ಮಾಡಲಿದೆ.
ಉಪಚುನಾವಣೆ ಸಂಬಂಧ ನಡೆದ ಸಭೆಯ ಬಳಿಕ ಮಾತನಾಡಿದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಉಪಚುನಾವಣೆ ನಡೆಯುವ ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಮತ್ತು ಉಪಚುನಾವಣೆಯಲ್ಲಿ ಪೂರ್ಣ ಶಕ್ತಿಯೊಂದಿಗೆ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಶಾಸಕರು ಲೋಕಸಭೆಗೆ ಆಯ್ಕೆಯಾದ ಕಾರಣ ಒಂಬತ್ತು ಸ್ಥಾನಗಳಿಗೆ ಉಪಚುನಾವಣೆ ಅನಿವಾರ್ಯವಾಗಿದ್ದು, ಕ್ರಿಮಿನಲ್ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾದ ನಂತರ ಎಸ್‌ಪಿ ನಾಯಕ ಇರ್ಫಾನ್ ಸೋಲಂಕಿ ಅವರನ್ನು ಶಾಸಕರಾಗಿ ಅನರ್ಹಗೊಳಿಸಿದ್ದರಿಂದ ಸಿಸಾಮಾವು ಸ್ಥಾನ ತೆರವಾಗಿದೆ.
Advertisement