ನವದೆಹಲಿ: ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಕುರಿತ ಹಿಂಡೆನ್ ಬರ್ಗ್ ರಿಸರ್ಚ್ ವರದಿಯನ್ನು ಬೆಂಬಲಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಕಂಗನಾ ರಣಾವತ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಅವರನ್ನು 'ಅತ್ಯಂತ ಅಪಾಯಕಾರಿ ವ್ಯಕ್ತಿ' ಎಂದು ಬಣ್ಣಿಸಿದ್ದು, ರಾಷ್ಟ್ರ ಮತ್ತು ಅದರ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಕಂಗನಾ, ಅವರು ಪ್ರಧಾನಿ ಕುರ್ಚಿ ಪಡೆಯಲು ಸಾಧ್ಯವಾಗದ ಕಾರಣ, ದುರುದ್ದೇಶಪೂರಿತ ವರಿದಿ ಕುರಿತು ಸರ್ಕಾರವನ್ನು ಖಂಡಿಸಿದ್ದಾರೆ. "ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ, ಅವರು ಕಹಿ, ವಿಷಕಾರಿ ಮತ್ತು ವಿನಾಶಕಾರಿ. ಅವರು ಪ್ರಧಾನಿಯಾಗದಿದ್ದರೆ ಇಡೀ ದೇಶವನ್ನು ನಾಶಗೊಳಿಸುವುದು ಅವರ ಅಜೆಂಡಾ ಆಗಿದೆ ಎಂದು ಟೀಕಿಸಿದ್ದಾರೆ.
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್‌ನ ಇತ್ತೀಚಿನ ವರದಿಯು SEBI ಮುಖ್ಯಸ್ಥರಾದ ಮಾಧಬಿ ಪುರಿ ಬುಚ್‌ನ ವಿರುದ್ಧ ನೇರ ಆರೋಪಗಳನ್ನು ಮಾಡಿತ್ತು. ಈ ಆರೋಪವನ್ನು 'ಆಧಾರರಹಿತ ಎಂದು ಕಂಗನಾ ಕಟುವಾಗಿ ಟೀಕಿಸಿದ್ದಾರೆ.
ದೊಡ್ಡದನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದ್ದ ಹಿಂಡೆನ್ ಬರ್ಗ್ ವರದಿ ನಿರಾಶೆಗೊಳಿಸಿದೆ. ಆದರೆ ರಾಹುಲ್ 'ಈ ರಾಷ್ಟ್ರ, ಅದರ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.
ಜೀವನಪೂರ್ತಿ ವಿಪಕ್ಷವಾಗಿಯೇ ಕುಳಿತುಕೊಳ್ಳಲು ಸಜ್ಜಾಗಿ. ಅವರು ಎಂದಿಗೂ ಅವರ ನಾಯಕರನ್ನಾಗಿ ನಿಮ್ಮನ್ನು ಮಾಡಲ್ಲ ಎಂದು ಕಂಗನಾ ವಾಗ್ದಾಳಿ ನಡೆಸಿದ್ದಾರೆ.
Advertisement