
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿನ ಮಹಿಳಾ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ರಾಷ್ಟ್ರದಾದ್ಯಂತ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿರುವಂತೆ
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಇಬ್ಬರು ಸದಸ್ಯರ ತಂಡ ಮಂಗಳವಾರ ಬೆಳಗ್ಗೆ ಘಟನೆ ನಡೆದಿದ್ದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿತು.
ಮಹಿಳಾ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ ಹಾಗೂ ಕೊಲೆಯಾಗಿದ್ದ ಆಸ್ಪತ್ರೆಯ ಸೆಮಿನಾರ್ ಹಾಲ್ ಗೆ ತೆರಳಿದ ತಂಡ ಸ್ಥಳದ ಪರಿಶೀಲನೆ ನಡೆಸಿತು.
ಬಳಿಕ ಡೆಲಿನಾ ಖೊಂಗ್ಡುಪ್ ನೇತೃತ್ವದ ಇಬ್ಬರು ಸದಸ್ಯರ ತಂಡ ಲಾಲ್ಬಜಾರ್‌ನಲ್ಲಿರುವ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ತನಿಖಾಧಿಕಾರಿಗಳನ್ನು ಭೇಟಿ ಮಾಡಿತು. ನಂತರ ಸಂತ್ರಸ್ತೆಯ ಪಾನಿಹತಿ ನಿವಾಸಕ್ಕೆ ತೆರಳಿ ಫೋಷಕರಿಗೆ ಸಾಂತ್ವನ ಹೇಳಿತು. ಖೊಂಗ್ಡುಪ್ ಅಪರಾಧವನ್ನು "ಘೋರ" ಮತ್ತು "ಅತ್ಯಂತ ದುರದೃಷ್ಟಕರ ಘಟನೆ" ಎಂದು ಬಣ್ಣಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆಯಾಗಿತ್ತು. ಈ ಅಪರಾಧಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನನೊಬ್ಬನನ್ನು ಶನಿವಾರ ಬಂಧಿಸಲಾಗಿದೆ.
Advertisement