ವಿಕಿ ಡೋನರ್ ಗೆ ಮಗುವಿನ ತಂದೆಯಾಗಿರಲು ಕಾನೂನು ಬದ್ಧ ಹಕ್ಕು ಇಲ್ಲ: ಹೈಕೋರ್ಟ್
ಬಾಂಬೆ: ವೀರ್ಯ ಅಥವಾ ಅಂಡಾಣು ದಾನಿಗೆ ಮಗುವಿನ ಜೈವಿಕ ಪೋಷಕರೆಂದು ಹಕ್ಕು ಪ್ರತಿಪಾದಿಸಲು ಸಾಧ್ಯವಿಲ್ಲ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
42ರ ವಯಸ್ಸಿನ ಮಹಿಳೆಯೊಬ್ಬರಿಗೆ ಆಕೆಯ 5 ವರ್ಷದ ಅವಳಿ ಮಕ್ಕಳನ್ನು ಭೇಟಿ ಮಾಡುವುದಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್ ಈ ಅಭಿಪ್ರಾಯ ಹೇಳಿದೆ.
ಆಕೆಯ ಮಕ್ಕಳು ತನ್ನ ಪತಿ ಹಾಗೂ ಮಕ್ಕಳ ಜನ್ಮಕ್ಕೆ ಅಂಡಾಣು ದಾನ ಮಾಡಿದ್ದ ತನ್ನ ಸಹೋದರಿಯ ಜೊತೆ ಇದ್ದಾರೆ. ಮಕ್ಕಳನ್ನು ಭೇಟಿ ಮಾಡಲು ಅನುಮತಿ ನೀಡಬೇಕೆಂದು ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಪಡೆದಿದ್ದ ಮಹಿಳೆ ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಮಹಿಳೆಯ ಪತಿ ಮಕ್ಕಳ ಜನ್ಮಕ್ಕೆ ತನ್ನ ಪತ್ನಿಯ ಸಹೋದರಿ ಕಾರಣವಾಗಿದ್ದು, ಆಕೆ ಅಂಡಾನು ದಾನ ಮಾಡಿ ಜೈವಿಕ ತಾಯಿಯಾಗಿದ್ದಾಳೆ, ಮಕ್ಕಳ ಮೇಲೆ ತನ್ನ ಪತ್ನಿಗೆ ಯಾವುದೇ ಹಕ್ಕು ಇಲ್ಲ ಎಂದು ವಾದಿಸಿದ್ದರು.
ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರಿದ್ದ ಏಕ ಪೀಠವು ಈ ವಾದವನ್ನು ಸ್ವೀಕರಿಸಲು ನಿರಾಕರಿಸಿತು, ಅರ್ಜಿದಾರರ ಕಿರಿಯ ಸಹೋದರಿ ಅಂಡಾಣು ದಾನಿಯಾಗಿದ್ದರೂ, ಅವಳಿಗಳ ಜೈವಿಕ ಪೋಷಕ ಎಂದು ಹೇಳಲು ಆಕೆಗೆ ಯಾವುದೇ ಕಾನೂನುಬದ್ಧ ಹಕ್ಕು ಇಲ್ಲ ಎಂದು ಕೋರ್ಟ್ ಹೇಳಿದೆ.
ಕಿರಿಯ ಸಹೋದರಿಯ ಪಾತ್ರವು ಅಂಡಾನು ದಾನಿ, ಬದಲಿಗೆ ಸ್ವಯಂಪ್ರೇರಿತ ದಾನಿ, ಮತ್ತು ಹೆಚ್ಚೆಂದರೆ, ಆಕೆ ಆನುವಂಶಿಕ ತಾಯಿಯಾಗಲು ಅರ್ಹತೆ ಪಡೆಯಬಹುದು ಮತ್ತು ಹೆಚ್ಚೇನೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ.