ED ನೂತನ ನಿರ್ದೇಶಕರಾಗಿ 1993ರ ಬ್ಯಾಚ್‌ IRS ಅಧಿಕಾರಿ ರಾಹುಲ್ ನವೀನ್ ನೇಮಕ!

ರಾಹುಲ್ ನವೀನ್ ಭಾರತೀಯ ಕಂದಾಯ ಸೇವೆಯ (ಆದಾಯ ತೆರಿಗೆ) 1993ರ ಬ್ಯಾಚ್ ಅಧಿಕಾರಿ. ರಾಹುಲ್ 2023ರ ಸೆಪ್ಟೆಂಬರ್ 15ರಂದು ತನಿಖಾ ಸಂಸ್ಥೆಯ ಹಾಲಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ರಾಹುಲ್ ನವೀನ್
ರಾಹುಲ್ ನವೀನ್
Updated on

ನವದೆಹಲಿ: 1993ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ರಾಹುಲ್ ನವೀನ್ ಅವರನ್ನು ಜಾರಿ ನಿರ್ದೇಶನಾಲಯದ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ರಾಹುಲ್ ಅವರ ನೇಮಕವು ತಾವು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರಲಿದೆ. ಇದು ಎರಡು ವರ್ಷಗಳ ಅವಧಿಗೆ ಮತ್ತು ಮುಂದಿನ ಆದೇಶಗಳನ್ನು ಹೊರಡಿಸುವವರೆಗೆ ಜಾರಿಯಲ್ಲಿರುತ್ತದೆ.

ರಾಹುಲ್ ನವೀನ್ ಭಾರತೀಯ ಕಂದಾಯ ಸೇವೆಯ (ಆದಾಯ ತೆರಿಗೆ) 1993ರ ಬ್ಯಾಚ್ ಅಧಿಕಾರಿ. ರಾಹುಲ್ 2023ರ ಸೆಪ್ಟೆಂಬರ್ 15ರಂದು ತನಿಖಾ ಸಂಸ್ಥೆಯ ಹಾಲಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಈ ಹಿಂದಿನ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಪ್ರಭಾರ ನಿರ್ದೇಶಕರಾಗಿ ನೇಮಿಸುವ ಮೊದಲು, ನವೀನ್ ಸಂಜಯ್ ಮಿಶ್ರಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು.

ರಾಹುಲ್ ನವೀನ್
KIADB ಕಚೇರಿ ಮೇಲೆ ಇಡಿ ದಾಳಿ: ಕೋಟ್ಯಾಂತರ ರೂ. ನಗದು, ದಾಖಲೆ ವಶ

ದೇಶದ 120ಕ್ಕೂ ಹೆಚ್ಚು ರಾಜಕೀಯ ನಾಯಕರನ್ನು ಇಡಿ ತನಿಖೆ ನಡೆಸುತ್ತಿದೆ. ಅದರಲ್ಲಿ ಸುಮಾರು 95 ಪ್ರತಿಶತದಷ್ಟು ಮಂದಿ ವಿರೋಧ ಪಕ್ಷದವರೇ ಆಗಿದ್ದಾರೆ. ರಾಜಕೀಯ ನಾಯಕರ ವಿರುದ್ಧ ತನಿಖೆಗಾಗಿ ಇಡಿ ಆಗಾಗ್ಗೆ ವಿರೋಧ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com