ನವದೆಹಲಿ: ಅದಾನಿ ವಿವಾದ ವಿಚಾರವನ್ನು ಜಂಟಿ ಸದನ ಸಮಿತಿ ತನಿಖೆಗೆ ನೀಡಬೇಕೆಂದು ಕಾಂಗ್ರೆಸ್ ಬುಧವಾರ ಪುನರುಚ್ಚರಿಸಿದ್ದು, ರಾಜ್ಯದ ಬಂದರು ವಲಯದಲ್ಲಿ ಏಕಸ್ವಾಮ್ಯವನ್ನು ಭದ್ರಪಡಿಸಿಕೊಳ್ಳಲು ಅದಾನಿ ಬಂದರಿಗೆ ಗುಜರಾತ್ ಸರ್ಕಾರ ನೆರವಾಗಿದೆ ಎಂದು ಆರೋಪಿಸಿದೆ.
ಗುಜರಾತ್ ಸರ್ಕಾರವ ಖಾಸಗಿ ಬಂದರುಗಳಿಗೆ ಬಿಲ್ಡ್-ಓನ್-ಆಪರೇಟ್-ಟ್ರಾನ್ಸ್‌ಫರ್ (ಬೂಟ್) ಆಧಾರದ ಮೇಲೆ 30 ವರ್ಷಗಳ ರಿಯಾಯಿತಿ ಅವಧಿಯನ್ನು ನೀಡುತ್ತದೆ. ನಂತರ ಮಾಲೀಕತ್ವವನ್ನು ಗುಜರಾತ್ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಈ ಮಾದರಿಯ ಆಧಾರದ ಮೇಲೆ ಅದಾನಿ ಬಂದರುಗಳು ಪ್ರಸ್ತುತ ಮುಂದ್ರಾ, ಹಜಿರಾ ಮತ್ತು ದಹೇಜ್ ಬಂದರುಗಳ ಮೇಲೆ ನಿಯಂತ್ರಣವನ್ನು ಹೊಂದಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಗೂ ಮುನ್ನಾ ಈ ರಿಯಾಯಿತಿ ಅವಧಿಯನ್ನು ಇನ್ನೂ 45 ವರ್ಷಗಳವರೆಗೆ ಒಟ್ಟು 75 ವರ್ಷಗಳವರೆಗೆ ವಿಸ್ತರಿಸಲು ಅದಾನಿ ಪೋರ್ಟ್ಸ್ ಗುಜರಾತ್ ಮ್ಯಾರಿಟೈಮ್ ಬೋರ್ಡ್ (GMB) ಗೆವಿನಂತಿಸಿತ್ತು. ಆದರೆ, ಇದು ಅನುಮತಿಸುವ ಗರಿಷ್ಠ 50 ವರ್ಷಗಳ ಅವಧಿಯನ್ನು ಮೀರಿದ್ದು, ಹೇಗಾದರೂ ಮಾಡುವಂತೆ ಗುಜರಾತ್ ಸರ್ಕಾರವನ್ನು ಗುಜರಾತ್ ಮ್ಯಾರಿಟೈಮ್ ಬೋರ್ಡ್ ಮನವಿ ಮಾಡಿತ್ತು. ಇದು ಎಷ್ಟು ಅವಸರದಲ್ಲಿತ್ತು ಎಂದರೆ ಅದು ತನ್ನ ಮಂಡಳಿಯಿಂದ ಅನುಮೋದನೆಯಿಲ್ಲದೆ ಮಾಡಿದೆ. ಇದರ ಪರಿಣಾಮವಾಗಿ ಫೈಲ್ ಹಿಂತಿರುಗಿದೆ ಎಂದು ಅವರು ಆರೋಪಿಸಿದ್ದಾರೆ.
ಇತರ ಕಂಪನಿಗಳಿಂದ ಬಿಡ್‌ಗಳನ್ನು ಆಹ್ವಾನಿಸುವ ಮೂಲಕ ಅಥವಾ ಅದಾನಿಯೊಂದಿಗೆ ಹಣಕಾಸು ನಿಯಮಗಳನ್ನು ಮರುಸಂಧಾನ ಮಾಡುವ ಮೂಲಕ 30 ವರ್ಷಗಳ ರಿಯಾಯಿತಿಯ ಅಂಗೀಕಾರದ ನಂತರ ಗುಜರಾತ್ ಸರ್ಕಾರ ತನ್ನ ಆದಾಯದ ಹಿತಾಸಕ್ತಿಗಳನ್ನು ರಕ್ಷಿಸಲು GMB ಶಿಫಾರಸು ಮಾಡಿತ್ತು. ಸ್ಪರ್ಧೆಯ ಸಾಧ್ಯತೆಯ ಬಗ್ಗೆ ಅಸಮಾಧಾನಗೊಂಡು GMB ಬೋರ್ಡ್‌ನ ನಿರ್ಧಾರದಲ್ಲಿ ಬದಲಾವಣೆಯನ್ನು ಒತ್ತಾಯಿಸಿದಂತಿದೆ. ಹೊಸ ಬಿಡ್‌ಗಳನ್ನು ಆಹ್ವಾನಿಸದೆ ಅಥವಾ ಷರತ್ತುಗಳನ್ನು ಮರು ಮಾತುಕತೆ ನಡೆಸದೆ ಅದಾನಿಗೆ ರಿಯಾಯಿತಿ ಅವಧಿಯ ವಿಸ್ತರಣೆಯನ್ನು ಶಿಫಾರಸು ಮಾಡಲು ಪರಿಷ್ಕರಿಸಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.
Advertisement